ಕೊಪ್ಪಳ: ಜಿಲ್ಲೆಯ ವಿವಿಧೆಡೆ ಬುಧವಾರ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು ನಾಲ್ಕು ಜನ ಮೃತಪಟ್ಟಿದ್ದಾರೆ. ಎರಡು ದಿನಗಳ ಅವಧಿಯಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಜಿಲ್ಲೆಯಲ್ಲಿ ಏಳಕ್ಕೆ ಏರಿದೆ.

ತಾಲ್ಲೂಕಿನ ಇಂದರಗಿ ಬಳಿ ಬುಧವಾರ ರಾತ್ರಿ ನಡೆದ ‘ಹಿಂಡ್ ಅಂಡ್ ರನ್’ ಅಪಘಾತದಲ್ಲಿ ಮೂವರು ಯುವಕರು ಇದ್ದ ಬೈಕ್ಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲೆ ತೆರಳುತ್ತಿದ್ದ ವಾಜೀದ್ (17), ರಾಜಾಹುಸೇನ್ (17) ಹಾಗೂ ಆಸೀಫ್ (18) ಮೃತಪಟ್ಟಿದ್ದಾರೆ. ವಾಜೀದ್ ಹಾಗೂ ರಾಜಾಹುಸೇನ್ ತಾಲ್ಲೂಕಿನ ಹೊಸಳ್ಳಿ ಗ್ರಾಮದ ನಿವಾಸಿಗಳು. ಆಸೀಫ್ ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದವರು. ಪ್ರಾಥಮಿಕ ಮಾಹಿತಿ ಪ್ರಕಾರ ಶ್ರೀರಾಮನಗರದಿಂದ ಹೊಸಳ್ಳಿಗೆ ಬುಲೆರೊ ವಾಹನ ಬರುವಾಗ ಘಟನೆ ನಡೆದಿದ್ದು, ಚಾಲಕ ಪರಾರಿಯಾಗಿದ್ದಾನೆ ಎಂದು ಗೊತ್ತಾಗಿದೆ.

ಮಂಗಳವಾರ ಕೊಪ್ಪಳ ತಾಲ್ಲೂಕಿನ ಕೊಪ್ಪಳ–ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯ ಕನಕಾಪುರ ವ್ಯಾಪ್ತಿಯ ಗಾಳೆಮ್ಮ ದೇವಸ್ಥಾನದ ಬಳಿ ವಾಹನ ಡಿಕ್ಕಿ ಹೊಡೆದು ಪರಿಣಾಮ ಅಗಳಕೇರಾ ಗ್ರಾಮ ಮರಸ್ವಾಮಿ (31) ಮೃತಪಟ್ಟಿದ್ದಾನೆ. ಹೊಸಪೇಟೆ–ಹುನಗುಂದ ರಾಷ್ಟ್ರೀಯ ಹೆದ್ದಾರಿ 50ರ ಹಿಟ್ನಾಳ್ ಟೋಲ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಹೊಸಳ್ಳಿ ಗ್ರಾಮದ ಬುಡನಸಾಬ್ (52) ವ್ಯಕ್ತಿ ಸಾವಿಗೀಡಾಗಿದ್ದಾನೆ.

ಮಂಗಳವಾರ ಬೆಳಿಗಿನ ಜಾವ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಭಕ್ತರನ್ನು ಕರೆದುಕೊಂಡು ಹೊರಟಗಿದ್ದ ಟ್ರ್ಯಾಕ್ಟರ್ಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದವು. ಅದರಲ್ಲಿ ಕೆಲವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಸಲಾಗಿದೆ. ಹರಪನಹಳ್ಳಿ ತಾಲ್ಲೂಕಿನ ಹೊನ್ನೆರಹಳ್ಳಿ ಗ್ರಾಮದ ಕೆಂಚಪ್ಪ (41) ಮೃತಪಟ್ಟವರು ಎಂದು ಮಾಹಿತಿ ಲಭ್ಯವಾಗಿದೆ. ಈ ಮೂರು ಪ್ರಕರಣಗಳಿಗೆ ಸಂಬಂಧಿಸಿ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.