ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕೂಲಿಕಾರರ ಹಕ್ಕು ಬಾಧ್ಯತೆ ಮಾಹಿತಿ ಶಿಬಿರ

Last Updated 7 ಸೆಪ್ಟೆಂಬರ್ 2021, 11:33 IST
ಅಕ್ಷರ ಗಾತ್ರ

ಮುಷ್ಟೂರ (ಕಾರಟಗಿ): ‘ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದು ನಮ್ಮೇಲ್ಲರ ಕರ್ತವ್ಯ‘ ಎಂದು ಎಸ್‌ಬಿಎಂ ಜಿಲ್ಲಾ ಸ್ಯಾನಿಟೈಜೇಷನ್ ಹಾಗೂ ಹೈಜಿನ್ ಸಮಾಲೋಚಕರಾದ ಬಸಮ್ಮ ಹುಡೇದ ಹೇಳಿದರು.

ತಾಲ್ಲೂಕಿನ ಮುಸ್ಟೂರು ಗ್ರಾಮ ಪಂಚಾಯಿತಿಯು ಸೋಮವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಚಿಲುಮೆ ಅಭಿವೃದ್ಧಿ ಅಭಿಯಾನದ ನಿಮಿತ್ತ ಆಯೋಜಿಸಿದ್ದ ವೈಯಕ್ತಿಕ‌ ಶುಚಿತ್ವ, ಋತುಚಕ್ರ ನಿರ್ವಹಣೆ ಹಾಗೂ ಮಹಿಳಾ ಕೂಲಿಕಾರರ ಹಕ್ಕು ಬಾಧ್ಯತೆಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ
ಮಾತನಾಡಿದರು.

ನರೇಗಾ ತಾಲ್ಲೂಕು ಐಇಸಿ‌ ಸಂಯೋಜಕ ಸೋಮನಾಥ ನಾಯಕ ಮಾತನಾಡಿ, ನರೇಗಾ ಯೋಜನೆಯಡಿ ಪುರುಷ, ಮಹಿಳೆಯರಿಗೆ ಸಮಾನ ವೇತನ ನೀಡಲಾಗುತ್ತಿದೆ. ಮಹಿಳೆಯರಿಗೆ ಅನೇಕ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಬಹುದು. ಕುರಿ, ಕೋಳಿ, ಜಾನುವಾರು ಶೆಡ್ ನಿರ್ಮಿಸಿಕೊಳ್ಳಲು, ಜಮೀನಿನಲ್ಲಿ ಬದು ನಿರ್ಮಾಣ, ಕೃಷಿ ಹೊಂಡ,‌ ಕೈತೋಟ ಸಹಿತ ಅನೇಕ ಕಾಮಗಾರಿಗಳನ್ನು ಮಾಡಿಕೊಳ್ಳಬಹುದು ಎಂದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ ಸಜ್ಜನ್‌ ಮಾತನಾಡಿದರು.

ಇದೇ ವೇಳೆ ಪೈಪ್ ಕಾಂಪೋಸ್ಟ್ ಅಳವಡಿಸಿ, ಸಮಗ್ರ ಮಾಹಿತಿ ನೀಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಆದಿಲ್ ಪಾಷಾ, ಕಾರ್ಯದರ್ಶಿ ವಿರುಪಣ್ಣ, ಸದಸ್ಯರಾದ ನಿಂಗಮ್ಮ ಬಸಪ್ಪ, ಜಯಣ್ಣ, ಕಾವ್ಯ ಮಹೇಶ್, ಮುಖ್ಯಗುರು ದೇವರಾಜ್, ಸಿಬ್ಬಂದಿ ಶಬ್ಬಿರ್, ಮಹಿಳಾ ಒಕ್ಕೂಟಕ ಅಧ್ಯಕ್ಷೆ ಹಂಪಮ್ಮ ಪ್ರಮುಖರಾದ ಎಂಬಿಕೆ ರಜೀಯಾ ಬೇಗಂ, ಶರಣಮ್ಮ, ಸುಜಾತ, ಭಾರತಿ, ರಾಜೇಶ್ವರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT