ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ| ಸಂಭ್ರಮದ ಗುದ್ನೇಶ್ವರ ಸ್ವಾಮಿ ರಥೋತ್ಸವ

Last Updated 12 ಡಿಸೆಂಬರ್ 2019, 13:44 IST
ಅಕ್ಷರ ಗಾತ್ರ

ಕುಕನೂರು: ತಾಲ್ಲೂಕಿನ ಗುದ್ನೇಪ್ಪನಮಠದ ಗುದ್ನೇಶ್ವರ ಸ್ವಾಮಿಯ ಪಂಚಕಳಸ ಮಹಾರಥೋತ್ಸವ ಗುರುವಾರ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದ ಅಭಿಷೇಕ, ಕುಂಕಮಾರ್ಚನೆ, ವಿವಿಧ ಪೂಜಾ ವಿಧಾನಗಳು ಜರುಗಿದವು. ಗುದ್ನೇಶ್ವರ ಸ್ವಾಮಿಯ ಪಂಚಕಳಸ ಮಹಾರಥೋತ್ಸವ ಬಿನ್ನಾಳ ಗ್ರಾಮದ ಬಸವೇಶ್ವರ ನಂದಿಕೋಲು ಹಾಗೂ ಕಕ್ಕಿಹಳ್ಳಿ ಅಳಿಯ ಚನ್ನಬಸವೇಸ್ವರ ಪಲ್ಲಕ್ಕಿ ಸೇವಾದೊಂದಿಗೆ ಜರುಗಿತು.

ಬೆದವಟ್ಟಿಯ ಶಿವ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಇಟಗಿಯ ಗುರುಶಾಂತ ಶಿವಾಚಾರ್ಯ ಸ್ವಾಮೀಜಿ, ಯಲಬುರ್ಗಾದ ಶ್ರೀಧರಮುರಡಿ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಪ್ರಭುಲಿಂಗ ದೇವರು,ಮಹಾದೇವ ದೇವರು, ಶಾಸಕ ಹಾಲಪ್ಪ ಆಚಾರ, ಸಿಪಿಐ ನಾಗರಡ್ಡಿ, ಪಿಎಸ್ಐ ವೆಂಕಟೇಶ ಎನ್., ತಹಸ್ಲೀದಾರ ಶ್ರೀಶೈಲ ತಳವಾರ, ಶಂಭು ಜೋಳದ, ಶ್ರೀಶೈಲಗೌಡ ಸಂಕನಗೌಡ, ರತನ್ ದೇಸಾಯಿ, ಶರಣಪ್ಪ ಬಣ್ಣದಭಾವಿ, ಶಿವುಕುಮಾರ ನಾಗಲಾಪೂರಮಠ, ಶರಣಪ್ಪ ಮಂಡಲಗೀರಿ, ಶರಣಪ್ಪ ಸೊಂಪುರ, ರಷೀದಸಾಬ್‌ ಹಣಜಗೇರಿ, ಸಿದ್ದು ಉಳ್ಳಾಗಡ್ಡಿ, ಬಸವರಾಜ ಹೊಸಮನಿ, ಶೇಖರಪ್ಪ ವಾರದ, ಅನಿಲ ಆಚಾರ, ಅ೦ದಪ್ಪ ಜವಳಿ,ಕಳಕಪ್ಪ ಕಂಬಳಿ, ಚನ್ನಬಸಯ್ಯ ಪೂಜಾರ್, ಮಲ್ಲಯ್ಯ ಭೂಪಾಲ್, ಸಿದ್ದಲಿಂಗಯ್ಯ ಬಂಡಿ, ಶರಣಯ್ಯ ಬಂಡಿ, ವೀರಯ್ಯ ಬ್ಯಾಳಿ, ಗುದ್ನೇಶ, ವೀರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT