ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ: ಮನೆ ಮನೆಗೆ ಶುದ್ಧ ನೀರು ಎಂಬ ಧ್ಯೇಯ್ಯೋದ್ದೇಶದೊಂದಿಗೆ ಗಣೇಶೋತ್ಸವ

Last Updated 24 ಆಗಸ್ಟ್ 2020, 3:29 IST
ಅಕ್ಷರ ಗಾತ್ರ

ಯಲಬುರ್ಗಾ: ಸ್ಥಳೀಯ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಗಣೇಶೋತ್ಸವವನ್ನು ಮನೆ ಮನೆಗೆ ಶುದ್ಧ ನೀರು ಎಂಬ ಧ್ಯೇಯ್ಯೋದ್ದೇಶದೊಂದಿಗೆ ಆಚರಿಸಲಾಯಿತು.

ಕೊರೊನಾ ಹಿನ್ನೆಲೆಯಲ್ಲಿ ಕೇವಲ ಒಂದೇ ದಿನಕ್ಕೆ ಸೀಮಿತಗೊಳಿಸಿ ಹಬ್ಬವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗಂಗಾವತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮೋಹನ್ ಮಾತನಾಡಿ,‘ಕಳೆದ ವರ್ಷ ಇದೇ ತಾಲ್ಲೂಕಿನಲ್ಲಿ ಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಗಣೇಶೋತ್ಸವವನ್ನು ಜಲಶಕ್ತಿಯ ಪರಿಕಲ್ಪನೆಯೊಂದಿಗೆ ಆಚರಿಸಲಾಗಿತ್ತು. ಈ ವರ್ಷ ಜಲ ಜೀವನ ಮಿಷನ್ ಎಂಬ ಪರಿಕಲ್ಪನೆಯಲ್ಲಿ ಮನೆ ಮನೆಗೆ ಶುದ್ಧ ನೀರು ಎಂಬುದಾಗಿದೆ. ಆಚರಣೆಯು ಸಾರ್ಥಕವಾಗುವ ಉದ್ದೇಶದಿಂದ ಜನರಲ್ಲಿ ಜಾಗೃತಿ ಮೂಡಿಸಲು ಗಣೇಶೋತ್ಸವವನ್ನು ಉಪಯೋಗಿಸುತ್ತಿರುವುದು ಸಂತಸ ತಂದಿದೆ’ ಎಂದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನಮಂತಗೌಡ ಪಾಟೀಲ ಮಾತನಾಡಿ,‘ನೀರಿನ ಸಂರಕ್ಷಣೆ ಹಾಗೂ ಶುದ್ಧ ನೀರಿನ ಬಳಕೆ, ಪ್ರಸ್ತುತ ಸನ್ನಿವೇಶದಲ್ಲಿ ನೀರಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ಸಲದ ಉದ್ದೇಶ’ ಎಂದು ನುಡಿದರು.

ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿ ಫಕೀರಪ್ಪ ಕಟ್ಟಿಮನಿ, ಬಸಲಿಂಗಪ್ಪ, ಶರಣಪ್ಪ ಹಾಗೂ ಶೇಖಪ್ಪ ಉಪ್ಪಾರ ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT