ಗುರುವಾರ , ಆಗಸ್ಟ್ 18, 2022
24 °C

ಉತ್ತಮ ಮಳೆ: ಬಿತ್ತನೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಹನುಮಸಾಗರ, ಹನುಮನಾಳ, ಹೂಲಗೇರಿ, ಯರಗೇರಿ ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿರುವುದು ಶನಿವಾರ ಕಂಡುಬಂದಿತು.

ಸಾಮಾನ್ಯವಾಗಿ ಈ ಭಾಗದ ರೈತರು ಸೂರ್ಯಕಾಂತಿ, ಹೆಸರು, ತೊಗರಿ ಬಿತ್ತನೆಗೆ ಹೆಚ್ಚಿನ ಆದ್ಯತೆ ಕೊಟ್ಟಿರುವುದು ಕಂಡುಬಂದರೆ ಕಪ್ಪು ಭೂಮಿ ಹೊಂದಿರುವ ರೈತರು ಎಳ್ಳು ಹಾಗೂ ಹೆಸರು ಬಿತ್ತನೆ ಮಾಡುತ್ತಿರುವುದು ಕಂಡುಬಂತು.

ಈ ಬಾರಿ ಬಿತ್ತನೆಗೆ ಸೂಕ್ತವಾಗುವ ಸಮಯದಲ್ಲಿ ಮಳೆಯಾಗಿರುವುದರಿಂದ ರೈತರು ಸಾಮೂಹಿಕವಾಗಿ ಬಿತ್ತನೆ ಆರಂಭಿಸಿದ್ದಾರೆ. ಎತ್ತಿನ ಕೂರಗಿ ಪ್ರಮಾಣ ಕಡಿಮೆಯಾಗಿರುವುದರಿಂದ ಬಹುತೇಕ ರೈತರು ಟ್ರ್ಯಾಕ್ಟರ್ ಮೂಲಕ ಬಿತ್ತನೆ ನಡೆಸಿದ್ದಾರೆ.

ಗಡಚಿಂತಿ ಗ್ರಾಮದ ರೈತ ಮಹಾಂತೇಶ ಗರೇಬಾಳ ಮಾಹಿತಿ ನೀಡಿ,‘ಈ ಬಾರಿ ಮಳೆ ನಮಗೆ ವಿಶ್ವಾಸ ಮೂಡಿಸಿದೆ. ಮುಂದಿನ ಮಳೆ ಸರಿಯಾದ ಸಮಯಕ್ಕೆ ಸುರಿದರೆ ಕಪ್ಪು ಭೂಮಿಯಲ್ಲಿ ಎರಡು ಬೆಳೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು