ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಸಿಡಿಲು ಬಡಿದು ಬಣವೆ ಭಸ್ಮ

Last Updated 18 ಏಪ್ರಿಲ್ 2021, 12:48 IST
ಅಕ್ಷರ ಗಾತ್ರ

ಹನುಮಸಾಗರ: ಭಾನುವಾರ ಮಧ್ಯಾಹ್ನ ಸುಮಾರು 20 ನಿಮಿಷ ಮಳೆ ಸುರಿಯಿತು. ರಸ್ತೆಗಳ ಮೇಲೆ ನೀರು ಹರಿಯಿತು.

ಸಮೀಪದ ಮಲಕಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಮುದುಕಪ್ಪ ಜೂಲಕಟ್ಟಿ ಎಂಬುವವರಿಗೆ ಸೇರಿದ ಮೇವಿನ ಬಣವೆ ಭಸ್ಮವಾಗಿದೆ.

‘ಬೆಂಕಿ ನಂದಿಸಲು ಪ್ರkoಯತ್ನಿಸಲಾಯಿತು. ಸಾಧ್ಯವಾಗಲಿಲ್ಲ. ರೈತನಿಗೆ ₹30 ಸಾವಿರ ನಷ್ಟವಾಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು’ ಎಂದು ಗ್ರಾಮಸ್ಥ ರಮೇಶ ಒತ್ತಾಯಿಸಿದರು.

ದೊಡ್ಡ ಪ್ರಮಾಣದಲ್ಲಿ ಗಾಳಿ ಬೀಸಿದ ಕಾರಣ ಅಲ್ಲಲ್ಲಿ ಮನೆಗಳ ಹೆಂಚು ಹಾರಿ ಹೋಗಿವೆ. ಬಣವೆಗಳ ಮೇವು ಚಲ್ಲಾಪಿಲ್ಲಿಯಾಗಿ ಬಿದ್ದಿದೆ.

‘ಇನ್ನು ಅರ್ಧಗಂಟೆ ಮಳೆ ಸುರಿದಿದ್ದರೆ ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗುತ್ತಿತ್ತು. ಜಾನುವಾರುಗಳಿಗೆ ಅನುಕೂಲವಾಗುತ್ತಿತ್ತು. ಅಲ್ಲದೆ, ಜಮೀನುಗಳನ್ನೂ ಹದ ಮಾಡಿಕೊಳ್ಳಬಹುದಾಗಿತ್ತು’ ಎಂದು ರೈತ ದೇವಪ್ಪ ಮಾವಿನಇಟಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT