ಬುಧವಾರ, ಆಗಸ್ಟ್ 4, 2021
24 °C

ಗ್ರಾ.ಪಂ ಚುನಾವಣೆ ಉತ್ಸಾಹದಿಂದ ಮತ ಚಲಾಯಿಸಿದ ಶತಾಯುಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಗಂಗಾವತಿ ತಾಲ್ಲೂಕಿನಾದ್ಯಂತ ಗ್ರಾ.ಪಂ ಚುನಾವಣೆಯ 2ನೇ ಹಂತದ ಮತದಾನ ಪ್ರಕ್ರಿಯೆ ಬಿರುಸುಗೊಂಡಿದ್ದು, ಮತದಾರರು ಬೆಳಗ್ಗೆಯಿಂದಲೇ ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ.

ತಾಲ್ಲೂಕಿನ ಹೆಬ್ಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ 120 ವರ್ಷದ ಶತಾಯುಷಿ ಕಂಚಿ ಚೌಡಮ್ಮ ಆಗಮಿಸಿ ಮತ ಚಲಾಯಿಸಿದರು. 

ಇನ್ನು, ಮೊದಲ ಬಾರಿಗೆ ಮತದಾನ ಮಾಡುವ ಹಕ್ಕನ್ನು ಪಡೆದ ತಾಲ್ಲೂಕಿನ ಶ್ರೀರಾಮನಗರದ ಯುವಕರಿಗೆ ಮತಗಟ್ಟೆಗೆ ಉತ್ಸಾಹದಿಂದ ಆಗಮಿಸಿ ಮತ ಚಲಾಯಿಸಿದರು. ಈ ವೇಳೆ ತಾಲ್ಲೂಕು ಪಂಚಾಯಿತಿ ಇಒ ಡಾ.ಡಿ.ಮೋಹನ್ ಪುಸ್ತಕ ನೀಡಿ ಯುವಕರನ್ನು ಅಭಿನಂದಿಸಿದರು.

ಇನ್ನು , ವಿಕಲಚೇತನರು ಹಾಗೂ ವಯಸ್ಸಾದವರಿಗೆ ಎಲ್ಲಾ ಬೂತ್ ಗಳಲ್ಲಿ ವೀಲ್ ಚೇರ್ ಸೌಲಭ್ಯ ವನ್ನು ಒದಗಿಸಿದ್ದು ಕಂಡುಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.