ಮಂಗಳವಾರ, ಜೂನ್ 28, 2022
22 °C

ಬೋಚನಹಳ್ಳಿ ಗ್ರಾ.ಪಂ: ಅಧ್ಯಕ್ಷರಾಗಿ ನಿಂಗಪ್ಪ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳವಂಡಿ: ಸಮೀಪದ ಬೋಚನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ನಿಂಗಪ್ಪ ಆವೋಜಿ ಆಯ್ಕೆಯಾಗಿದ್ದಾರೆ.

ಈ ಗ್ರಾಮ ಪಂಚಾಯಿತಿ 20 ಸದಸ್ಯ ಬಲ ಹೊಂದಿದೆ.

ಬೋಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಕಳೆದ ಹಲವು ದಿನಗಳಿಂದ ತೆರವಾಗಿತ್ತು. ಈ ಹಿಂದೆ ಇದ್ದ ಬಿಜೆಪಿ ಬೆಂಬಲಿತ ಅಧ್ಯಕ್ಷೆ ಲಕ್ಷ್ಮವ್ವ ಭೀಮೆಶಪ್ಪ ಹವಳ್ಳನವರ ಅವರು 15 ತಿಂಗಳು ಆಡಳಿತ ನಡೆಸಿ ಒಪ್ಪಂದದಂತೆ ರಾಜೀನಾಮೆ ಸಲ್ಲಿಸಿದ್ದರು.

ನಿಂಗಪ್ಪ ಆವೋಜಿ ಹಾಗೂ ಆನಂದರಡ್ಡಿ ರಡ್ಡೇರ ನಾಮಪತ್ರ ಸಲ್ಲಿಸಿದ್ದರು. ನಿಂಗಪ್ಪ ಆವೋಜಿ 10 ಮತಗಳನ್ನು ನಡೆದು ಆಯ್ಕೆಯಾದರೆ, ಆನಂದರಡ್ಡಿ ರಡ್ಡೇರ 9 ಮತ ಪಡೆದು ಪರಾಭವಗೊಂಡರು.

ಒಂದು ಮತ ತಿರಸ್ಕೃತವಾಗಿದೆ. ನಂತರ ತಹಶೀಲ್ದಾರ್ ವಿಠಲ ಚೌಗಲೆ ಅವರು ಅಧ್ಯಕ್ಷರನ್ನು ಘೋಷಣೆ ಮಾಡಿದರು.

ಪಿಎಸ್ಐ ಮಾತಂಡಪ್ಪ ನೇತೃತದಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ್ ಒದಗಿಸಲಾಗಿತ್ತು. ಪಿಡಿಒ ಬಸವರೆಡ್ಡಿ ತವದಿ, ಗ್ರಾಮ ಲೆಕ್ಕಾಧಿಕಾರಿ ವಿಷ್ಣು ನಾಯಕ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು