ಹನುಮಸಾಗರ: ‘ವಿದ್ಯಾರ್ಥಿಗಳು ಎಲ್ಲ ಭಾಷೆ ಒಂದೇ ಎಂದು ಅರ್ಥೈಸಿಕೊಂಡು ಓದಬೇಕು’ ಎಂದು ಹನುಮನಾಳ ಪಿಯು ಕಾಲೇಜಿನ ಉಪನ್ಯಾಸಕ ಸಂಜಯ ಬಡಿಗೇರ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಇಂಗ್ಲಿಷ್ ಭಾಷಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಉಪನ್ಯಾಸಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶ್ರಮಿಸುತ್ತಿರುತ್ತಾರೆ. ಅವರ ಶ್ರಮ ಸಾರ್ಥಕವಾಗಬೇಕಾದರೆ ಹೆಚ್ಚಿನ ಅಂಕ ಪಡೆಯಬೇಕು. ಇಂಗ್ಲಿಷ್ ಭಾಷೆ ಕಠಿಣವಲ್ಲ. ಶಬ್ದಕೋಶ ವೃದ್ಧಿ, ಉಚ್ಛಾರಣೆ ಹಾಗೂ ಸುಧಾರಣೆ ಮುಖ್ಯ. ಅಂದಾಗ ಯಾವುದೇ ಭಾಷೆ ಇದ್ದರೂ ಸರಳವಾಗುತ್ತದೆ’ ಎಂದು ತಿಳಿಸಿದರು.

ಪ್ರಾಂಶುಪಾಲ ಭೀಮಪ್ಪ ಗೊಲ್ಲರ ಮಾತನಾಡಿದರು.

ಉಪನ್ಯಾಸಕರಾದ ಲಕಪತಿ ರಾಠೋಡ, ಶರಣಬಸವ.ಎಚ್., ಶರಣಪ್ಪ ಗೋಡೇಕಾರ, ಭರಮಲಿಂಗೇಶ ದೇವರಮನಿ, ಗೀತಾ ಬಂಡಿಹಾಳ, ಎಸ್ಡಿಎ ವನಜಾಕ್ಷಿ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.