ಮಂಗಳವಾರ, ನವೆಂಬರ್ 12, 2019
28 °C

ಕೊಪ್ಪಳ ಜಿಲ್ಲೆ | ಮನೆಯ ಚಾವಣಿ ಕುಸಿದು ಮೂವರು ಸಾವು

Published:
Updated:

ಕೊಪ್ಪಳ: ಮನೆಯ ಚಾವಣಿ ಕುಸಿದು ಮೂವರು ಮೃತಪಟ್ಟ ಘಟನೆ ತಾಲ್ಲೂಕಿನ ಯಲಮಗೇರಾ ಗ್ರಾಮದಲ್ಲಿ ನಡೆದಿದೆ.

ಬುಧವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಅಕ್ಕ ಹಾಗೂ ಇಬ್ಬರು ತಮ್ಮಂದಿರು ಮೃತಪಟ್ಟಿದ್ದಾರೆ.


ಘಟನಾ ಸ್ಥಳದಲ್ಲಿ ಸೇರಿರುವ ಜನ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಸುಜಾತಾ (22), ಅಮರೇಶ್ (18) ಹಾಗೂ ಗವಿಸಿದ್ದಪ್ಪ (15) ಎಂಬುವವರು ಅಸುನೀಗಿದ್ದು, ತಂದೆ ಸೋಮಣ್ಣ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಕುಟುಂಬದವರ ರೋಧನ

 

ಪ್ರತಿಕ್ರಿಯಿಸಿ (+)