ಮಂಗಳವಾರ, ಮೇ 18, 2021
29 °C

ಹೆಜ್ಜೇನು ದಾಳಿ; ಹಲವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ಸ್ಥಳೀಯ ತಹಶೀಲ್ ಕಚೇರಿ ಆವರಣದಲ್ಲಿ ನಡೆದ ಹೆಜ್ಜೇನು ದಾಳಿಯಲ್ಲಿ ಬಾಲಕ ಸೇರಿ ಐವರು ಗಾಯಗೊಂಡಿದ್ದಾರೆ.

ಗಾಯಾಳುಗಳು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ ಮಧ್ಯಾಹ್ನ ದಾಳಿ ನಡೆದಿದೆ. ಚಂಡೂರು ಗ್ರಾಮದ ಬಸಯ್ಯ, ಕಲ್ಲೂರು ಗ್ರಾಮದ ಹನಮಂತಪ್ಪ ಹಿರೇಕುರುಬರ, ಧರ್ಮರಾಜ ಹಿರೇಕುರುಬರ ಹಾಗೂ ಹಗೆದಾಳದ ಸೋಮನಗೌಡ ಮತ್ತು ಮೂರು ವರ್ಷದ ಬಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.

ಕಚೇರಿ ಆವರಣದಲ್ಲಿರುವ ಹುಣಸೆ ಮರದಲ್ಲಿದ್ದ ಹೆಜ್ಜೇನು ಗೂಡಿನಿಂದ ಹುಳುಗಳು ದಾಳಿ ನಡೆಸಿದ್ದರಿಂದ ಈ ಅನಾಹುತ ಸಂಭವಿಸಿದೆ. ಮೊದಲಿಗೆ ಹೆಜ್ಜೇನು ಕಡಿತಕ್ಕೆ ಒಳಗಾಗಿದ್ದ ಸೋಮನಗೌಡ ಎಂಬವರು ಸ್ಥಳದಲ್ಲಿಯೇ ಕುಸಿದು ತೀವ್ರ ಅಸ್ವಸ್ಥ್ಯಗೊಳ್ಳುತ್ತಿದ್ದಂತೆ ಕೆಲ ಯುವಕರು ಅವರನ್ನು ರಕ್ಷಿಸಲು ಮುಂದಾದರು, ಹೆಲ್ಮೆಟ್ ಹಾಗೂ ವಸ್ತ್ರಗಳನ್ನು ಹೊಚ್ಚಿಕೊಂಡು ಗಾಯಾಳುಗಳನ್ನು ದಾಳಿ ಸ್ಥಳಗಳಿಂದ ಕರೆತಂದರು. ಆಂಬುಲೆನ್ಸ್ ಬರುವಷ್ಟರಲ್ಲಿ ಮತ್ತೆ ಮೂರ್ನಾಲ್ಕು ಜನರಿಗೆ ಕಚ್ಚಿದ್ದವು. ಅವರೆಲ್ಲರೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು