ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಗೆಮ್ಮ ದೇವಸ್ಥಾನ: 69 ಜೋಡಿ ದಾಂಪತ್ಯ ಜೀವನಕ್ಕೆ

Published 31 ಜನವರಿ 2024, 14:30 IST
Last Updated 31 ಜನವರಿ 2024, 14:30 IST
ಅಕ್ಷರ ಗಾತ್ರ

ಮುನಿರಾಬಾದ್: ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ರಾಜ್ಯ ಸರ್ಕಾರದ ‘ಮಾಂಗಲ್ಯ ಭಾಗ್ಯ’ ಯೋಜನೆಯಡಿ 69 ಜೋಡಿ ನವ ವಧು ವರರು ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ದೇವಸ್ಥಾನದ ಅರ್ಚಕರಾದ ನಾಗರಾಜ ಭಟ್ ಜೋಶಿ, ವಲ್ಲಭ ಜೋಶಿ, ಟಿ.ಶ್ರೀನಿವಾಸ, ಗೋಪಾಲಕೃಷ್ಣ ಮತ್ತು ಶ್ರೀಪಾದ ಭಟ್ಟ ಜೋಶಿ ಇವರ ಮಂತ್ರಘೋಷ ಮತ್ತು ದೇವಸ್ಥಾನದ ಮಂಗಳವಾದ್ಯ ತಂಡದ ವಾದ್ಯ ಮೇಳದ ನಡುವೆ ಮಾಂಗಲ್ಯ ಧಾರಣೆ ನಡೆಯಿತು. ನಂತರ ನೂತನ ವಧು, ವರರು ದೇವಿಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, ಮದುವೆಯ ನಂತರ ಅರ್ಧ ಜವಾಬ್ದಾರಿ, ಮಕ್ಕಳಾದ ನಂತರ ಪೂರ್ಣ ಜವಾಬ್ದಾರಿ ಬರುತ್ತದೆ. ಪರಸ್ಪರ ಹೊಂದಾಣಿಕೆಯಿಂದ ಜೀವನ ಮಾಡಬೇಕು ಎಂದು ಹಾರೈಸಿದರು.

ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಈ. ವೀರೇಶ್ ಮಾತನಾಡಿ, ಸರ್ಕಾರ ₹ 55 ಸಾವಿರ ಖರ್ಚು ಮಾಡಿ ಬಡವರಿಗೆ ಆರ್ಥಿಕ ಹೊರೆಯನ್ನು ತಪ್ಪಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಸರ್ಕಾರದ ಸಾಮೂಹಿಕ ವಿವಾಹ ನೀತಿಯು ಜಾತಿ ತಾರತಮ್ಯ ತೊಡೆದು, ಸಾಮಾಜಿಕ ಸಮಾನತೆ ಕಲ್ಪಿಸುವುದಾಗಿದೆ. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣ ಅವರು ಸಮಾಜದಲ್ಲಿನ ಜಾತಿ ವ್ಯವಸ್ಥೆ ಮತ್ತು ಅಸಮಾನತೆ ತೊಡೆದು ಹಾಕಲು ಶ್ರಮಿಸಿದರು. ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರ ಪರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೇವೆ ನೆನೆಯಬೇಕು ಎಂದರು.

ಬಿಜೆಪಿ ನಾಯಕಿ ಮಂಜುಳಾ ಕರಡಿ, ಟಿ. ಜನಾರ್ದನ ಮಾತನಾಡಿ ವಧು ವರರಿಗೆ ಶುಭ ಹಾರೈಸಿದರು.

ದೇವಸ್ಥಾನ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ವಧು ವರರಿಗೆ ದೃಢೀಕರಣ ಪತ್ರ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಗುಂಗಾಡಿ ಮತ್ತು ಸದಸ್ಯರು, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಪಂಪನಗೌಡ ಪಾಟೀಲ್, ಶೇಖರಪ್ಪ ಸಿಂದೋಗಿ, ಸುಜಾತಾ ಶಂಕ್ರಪ್ಪ, ಅನಿತಾ ಯಮನೂರಪ್ಪ, ಪರಶುರಾಮ, ಗಣ್ಯರಾದ ಪ್ರಭು ರಾಜ ಪಾಟೀಲ್, ಯಂಕಪ್ಪ ಹೊಸಳ್ಳಿ, ಪಾಲಾಕ್ಷಪ್ಪ ಗುಂಗಾಡಿ ಸಂಘ ಸಂಸ್ಥೆಯ ಪದಾಧಿಕಾರಿಗಳು, ಗಣ್ಯರು ಇದ್ದರು.

ಅಗಳಕೇರಾ ಗ್ರಾಮದ ಯುವಕ ಸಂತೋಷ ಕೋರಗಲ್ ಅವರು ವಧು-ವರರಿಗೆ ಸಸಿಗಳನ್ನು ಉಡುಗೊರೆಯಾಗಿ ನೀಡಿ ಬೆಳೆಸುವಂತೆ ಮನವಿ ಮಾಡಿದರು. ಬಿ.ಪ್ರಸಾದ್ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಮದುವೆಯಲ್ಲಿ ಪಾಲ್ಗೊಂಡ ವಧು ವರರು ಮತ್ತು ನೆಂಟರಿಗೆ ಗೋಧಿ ಪಾಯಸ, ಅನ್ನ ಸಾಂಬಾರ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮುನಿರಾಬಾದ್ ಸಮೀಪ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಬುಧವಾರ ನಡೆದ ಸಾಮೂಹಿಕ ವಿವಾಹದಲ್ಲಿ ವಧು ವರರು
ಮುನಿರಾಬಾದ್ ಸಮೀಪ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಬುಧವಾರ ನಡೆದ ಸಾಮೂಹಿಕ ವಿವಾಹದಲ್ಲಿ ವಧು ವರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT