ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಿಗಿ: ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

Published 26 ಮೇ 2024, 3:18 IST
Last Updated 26 ಮೇ 2024, 3:18 IST
ಅಕ್ಷರ ಗಾತ್ರ

ಮುನಿರಾಬಾದ್: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಹುಲಿಗಿಯ ಹುಲಿಗೆಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರ ಆರಂಭಗೊಂಡವು.

ದೇವಸ್ಥಾನದಿಂದ ತುಂಗಭದ್ರಾ ನದಿಗೆ ಮಂಗಳ ವಾದ್ಯದೊಂದಿಗೆ ತೆರಳಿದ ಹುಲಿಗೆಮ್ಮ ದೇವಿ ಮೂರ್ತಿ ಮೆರವಣಿಗೆಯು ಗಂಗಾ ಪೂಜೆ ಬಳಿಕ ದೇವಸ್ಥಾನಕ್ಕೆ ಮರಳಿತು.

ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚಕರ ವೇದಘೋಷದೊಂದಿಗೆ ಹೋಮ, ಪೂರ್ಣಾಹುತಿ ಮತ್ತು ದೇವಿಯ ಸಾಂಪ್ರದಾಯಿಕ ಹಿರಿಯರಿಗೆ ನೈವೇದ್ಯ ಸಮರ್ಪಣೆ ಮತ್ತು ಗರ್ಭಗುಡಿಯಲ್ಲಿನ ಬೆಳ್ಳಿ ಮಂಟಪಕ್ಕೆ ಕಂಕಣ ಧಾರಣೆ ಮಾಡುವ ಮೂಲಕ ಜಾತ್ರೆಯ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಸಾಂಪ್ರದಾಯಿಕ ಪೂಜಾರ ಮನೆತನದವರು, ಪಾಯಸದವರು, ಬಾಳಿ ದಂಡಿಗೆಯವರು ಮತ್ತು ಪ್ರಮುಖರಿಗೆ ಕಂಕಣ ಧಾರಣೆ ನಡೆಯಿತು.

ದೇವಸ್ಥಾನದ ಅರ್ಚಕರಾದ ನಾಗರಾಜ ಭಟ್ಟ, ಶ್ರೀನಿವಾಸ ಭಟ್ಟ, ವಲ್ಲಭ ಭಟ್ಟ ಜೋಶಿ, ಶ್ರೀಪಾದ ಭಟ್ಟ, ಟಿ.ಶ್ರೀನಿವಾಸ, ಗೋಪಾಲಕೃಷ್ಣ ಮತ್ತು ಕೀರ್ತಿನಾಥ ಹೊಸಪೇಟೆ, ಹುಲಿಗಿಯ ಬಾಳೆದಂಡಿಗೆ, ಪಾಯಸ ಮತ್ತು ಸಾಂಪ್ರದಾಯಿಕ ಪೂಜಾರ ಮನೆತನದ, ದೈವದ ಪ್ರತಿನಿಧಿಗಳು, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮತ್ತು ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡರು.

ಮುನಿರಾಬಾದ್ ಸಮೀಪ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ದೇವಸ್ಥಾನದಲ್ಲಿ ಹೋಮ ನಡೆಯಿತು
ಮುನಿರಾಬಾದ್ ಸಮೀಪ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ದೇವಸ್ಥಾನದಲ್ಲಿ ಹೋಮ ನಡೆಯಿತು
ಹುಲಿಗೆಮ್ಮ ದೇವಿಯ ಅಲಂಕೃತ ವಿಗ್ರಹ
ಹುಲಿಗೆಮ್ಮ ದೇವಿಯ ಅಲಂಕೃತ ವಿಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT