ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT
ADVERTISEMENT

ಬಲ್ಡೋಟಾ ಕಾರ್ಖಾನೆ ವಿಸ್ತರಣೆ| IIS ವರದಿ ಆಧರಿಸಿ ಮುಂದಿನ ಹೆಜ್ಜೆ: ಎಂ.ಬಿ.ಪಾಟೀಲ

Published : 12 ಡಿಸೆಂಬರ್ 2025, 7:25 IST
Last Updated : 12 ಡಿಸೆಂಬರ್ 2025, 7:25 IST
ಫಾಲೋ ಮಾಡಿ
Comments
ಬಲ್ದೋಟಾ ಘಟಕಕ್ಕೆ ಕೇಂದ್ರ ಸರ್ಕಾರವೇ ಎಲ್ಲ ರೀತಿಯ ಅನುಮತಿ ನೀಡಿದೆ. ಮಾಲಿನ್ಯ ನಿಯಂತ್ರಣ ನಿಯಮ ಪಾಲಿಸಿದರಷ್ಟೇ ಕಾರ್ಯಚರಣೆಗೆ ಅವಕಾಶ ನೀಡುತ್ತೇವೆ. ಗವಿಮಠದ ಸ್ವಾಮೀಜಿಯನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡುವೆ.
ಎಂ.ಬಿ. ಪಾಟೀಲ ಕೈಗಾರಿಕಾ ಸಚಿವ
ಬಲ್ಡೋಟಾ ತನ್ನ ಆವರಣದಲ್ಲಿರುವ ಕೆರೆಯ ಮೂಲಸ್ವರೂಪವನ್ನು ಹಾಳು ಮಾಡಿದೆ. ಜಾನುವಾರುಗಳು ನೀರು ಕುಡಿಯಲು ಕೂಡ ಬಿಡುತ್ತಿಲ್ಲ. ಇದನ್ನು ಹೇಗೆ ಒಪ್ಪಿಕೊಳ್ಳಬೇಕು.
ಹೇಮಲತಾ ನಾಯಕ ವಿಧಾನಪರಿಷತ್‌ ಸದಸ್ಯೆ
ಒಟ್ಟು 28 ಸ್ಪಾಂಜ್‌ ಐರನ್‌ ಘಟಕಗಳು
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 28 ಸ್ಪಾಂಜ್‌ ಐರನ್‌ ಘಟಕಗಳ ಜೊತೆಗೆ ಕಬ್ಬಿಣ ತಯಾರಿಕಾ ಘಟಕಗಳು ಕೂಡ ಕಾರ್ಯನಿರ್ವಹಿಸುತ್ತಿವೆ. ಇವುಗಳಿಂದ ₹4683 ಕೋಟಿ ಬಂಡವಾಳ ಹೂಡಿಕೆಯಾಗಿದ್ದು 7048 ಜನರಿಗೆ ಉದ್ಯೋಗ ಸೃಷ್ಟಿಯಾಗಿವೆ ಎಂದು ಸಚಿವರು ಹೇಳಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಲ ಹಾಗೂ ವಾಯುಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆಯ ಅನ್ವಯ ಬಲ್ಡೋಟಾ ಕಂಪನಿಗೆ ವಾರ್ಷಿಕ 3.5 ಮಿಲಿಯನ್‌ ಟನ್‌ ಸಾಮರ್ಥ್ಯದ ಇಂಟಿಗ್ರೇಟೆಡ್‌ ಸ್ಟೀಲ್‌ ಪ್ಲಾಂಟ್‌ 295 ಮೆಗಾವ್ಯಾಟ್‌ ಸಾಮರ್ಥ್ಯದ ಸ್ವಾಯತ್ತ ವಿದ್ಯುತ್‌ ಸ್ಥಾವರ ಸ್ಥಾಪನೆಗೆ ನವದೆಹಲಿಯ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ 2021ರ ಜುಲೈನಲ್ಲಿ ಸಮ್ಮತಿ ಪತ್ರ ನೀಡಿದೆ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ. 2025ರ ಫೆಬ್ರುವರಿಯಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಬಿಎಸ್‌ಪಿಎಲ್‌ ₹54 ಸಾವಿರ ಕೋಟಿ ಬಂಡವಾಳ ಹೂಡುವ ವಿಸ್ತರಣಾ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದೂ ಹೇಳಿದ್ದಾರೆ.
ಕೊಪ್ಪಳದಲ್ಲಿ ಮುಂದುವರಿದ ಸಂಘಟನೆಗಳ ಪ್ರತಿಭಟನೆ
ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ ಜಿಲ್ಲಾ ಬಚಾವೊ ಆಂದೋಲನ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಹೋರಾಟ ಗುರುವಾರ 42 ದಿನಗಳನ್ನು ಪೂರ್ಣಗೊಳಿಸಿದೆ. ಧರಣಿಗೆ ಕೊಪ್ಪಳ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಬೆಂಬಲಿಸಿದರು. ಮನವಿ ಸಲ್ಲಿಕೆ: ಬಿಎಸ್‌ಪಿಎಲ್‌ ಕಂಪನಿಗೆ ಭೂಮಿ ಕಳೆದುಕೊಂಡ ರೈತರು 7 ದಿನಗಳಿಂದ ಧರಣಿ ನಡೆಸುತ್ತಿದ್ದು ತಹಶೀಲ್ದಾರ್‌ ವಿಠ್ಠಲ ಚೌಗುಲಾ ಅವರಿಗೆ ಮನವಿ ಸಲ್ಲಿಸಿ ರೈತರ ಬೇಡಿಕೆ ಈಡೇರಿಸಬೇಕು ಎಂದು ಕೋರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT