ಶನಿವಾರ, ಸೆಪ್ಟೆಂಬರ್ 18, 2021
21 °C

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಘಟ್ಟಿರಡ್ಡಿಹಾಳ (ಅಳವಂಡಿ): ಘಟ್ಟಿರಡ್ಡಿಹಾಳ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸದಸ್ಯರಿಗೆ ಸೋಮವಾರ ಪ್ರೋತ್ಸಾಹ ಧನ ನೀಡಲಾಯಿತು.

ರಾಬಕೊ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ವೆಂಕನಗೌಡ ಹಿರೇಗೌಡರು ಮಾತನಾಡಿ,‘ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ 2020–21 ನೇ ಸಾಲಿನ ಲೆಕ್ಕಪರಿಶೋಧನೆ ಆಧಾರದ ಮೇಲೆ ಉಳಿದ ಲಾಭಾಂಶದಲ್ಲಿ ಮಾರ್ಚ್ 2021ರಲ್ಲಿ ಹಾಲು ಹಾಕಿರುವ ಸದಸ್ಯರಿಗೆ ಪ್ರೋತ್ಸಾಹ ಧನ ನೀಡಲಾಗಿದೆ. ಜತೆಗೆ ರೈತರಿಗೆ ಕಡಿಮೆ ದರದಲ್ಲಿ ರಾಸುಗಳಿಗೆ ವಿಮೆ ಮಾಡಿಕೊಡಲಾಗುತ್ತಿದೆ’ ಎಂದು ಹೇಳಿದರು.

ಸಂಘದ ಅಧ್ಯಕ್ಷೆ ಅಕ್ಕಮ್ಮ ಡಂಬಳ , ಕೃಷ್ಣ ಬೆಟಗೇರಿ, ಮಹೇಶ ಡಂಬಳ, ಬಸವರಾಜ ಸಂಗರೆಡ್ಡಿ, ಶರಣಪ್ಪಗೌಡ ಪಾಟೀಲ, ಪ್ರಕಾಶ ಕವಲೂರು, ಕ್ಷೇತ್ರ ಸಹಾಯಕ ಕಾಸಿಂಸಾಬ್ ಬೆಟಗೇರಿ, ಪ್ರತಿಭಾ ಕಲ್ಲುಗುಡಿ, ಯಲ್ಲಪ್ಪ ವಾಲೀಕಾರ್, ಅಶೋಕ್ ಬಾಬು ಸಂಗರೆಡ್ಡಿ ಹಾಗೂ ಕಾರ್ಯದರ್ಶಿ ಸುಮಂಗಲಾ ಸಂಗರೆಡ್ಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು