ಕೊಪ್ಪಳ: ಮುಖ್ಯಮಂತ್ರಿಯಡಿಯೂರಪ್ಪನವರಉತ್ತರ ಕರ್ನಾಟಕ ಬಗೆಗಿನ ಕಾಳಜಿ ಹಾಗೂಈ ಭಾಗದವರೇಆದ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರ ಮಹತ್ವಾಕಾಂಕ್ಷೆಯಿಂದ ಜಿಲ್ಲೆಯಲ್ಲಿ ಹೆಚ್ಚು ಕೈಗಾರಿಕೆ ಸ್ಥಾಪಿಸುವುದಕ್ಕೆ ವಿಫುಲ ಅವಕಾಶ ಇವೆ ಎಂದುಬಿಜೆಪಿ ಯುವ ಮುಖಂಡಹಾಗೂ ಫಾರಿನ್ ಇನ್ವೆಸ್ಟರ್ ಕೌನ್ಸಿಲ್ (ಎಫ್.ಐ.ಸಿ) ಸದಸ್ಯರಾಗಿ ನೇಮಕಗೊಂಡಿರುವ ಅಮರೇಶ ಕರಡಿ ಅಭಿಪ್ರಾಯಪಟ್ಟರು.

ಶನಿವಾರ ಬೃಹತ್ ಕೈಗಾರಿಕೆ ಸಚಿವರ ನೇತೃತ್ವದಲ್ಲಿ ನಡೆದ ಫಾರಿನ್ ಇನ್ವೆಸ್ಟರ್ ಕೌನ್ಸಿಲ್ (ಎಫ್.ಐ.ಸಿ) ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಆರ್ಥಿಕ ವಲಯ ಸ್ಥಾಪನೆಗೆ ಪೂರಕ ಎನ್ನುವಂತೆ ಸಂಸದ ಕರಡಿ ಸಂಗಣ್ಣನವರ ಅವಿರತ ಪ್ರಯತ್ನದಿಂದಾಗಿ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಮಾರ್ಗಗಳ ಅಭಿವೃದ್ಧಿಯ ವೇಗಜಿಲ್ಲೆಯಲ್ಲಿಉದ್ಯಮ ಸ್ಫಾಪನೆಗೆ ಕೈಬಿಸಿ ಆಹ್ವಾನಿಸುವಂತಿದೆಎಂದರು.

ಕೊಪ್ಪಳ ಜಿಲ್ಲೆ ಐತಿಹಾಸಿಕ, ಪ್ರಾಗೈತಿಹಾಸಿಕ, ಸಾಮಾಜಿಕ ಸಮೃದ್ಧ ನೆಲೆ ಹೊಂದಿದೆ. ಸಮೀಪದ ಹಂಪಿ ಸೇರಿದಂತೆ ವಿಶ್ವವಿಖ್ಯಾತ ತಾಣಗಳು, ನೆಲ, ಜಲ, ವಾಯು ಆರ್ಥಿಕ ವಲಯ ಸ್ಥಾಪನೆಗೆ ಸೂಕ್ತವಾಗಿದೆ. ಭವಿಷ್ಯದಲ್ಲಿ ಅಂಜನಾದ್ರಿಯಿಂದ ಅಯೋಧ್ಯೆಗೆ ವಿಮಾನಯಾನ ಸಂಪರ್ಕ, ಮೆಕ್ಕೆಜೋಳ ಸಂಸ್ಕರಣಾ ಘಟಕ, ಫುಡ್ ಪಾರ್ಕ್ ನಿರ್ಮಾಣಕ್ಕೆ ಜಮೀನು ಲಭ್ಯತೆ ಇದೆ. ಹೂಡಿಕೆದಾರರು ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.

'ಕೊಪ್ಪಳ ಜಿಲ್ಲೆಯನ್ನು ಕೃಷಿ ಜೊತೆ, ಜೊತೆಗೆ ಕೈಗಾರಿಕೆ ವಸಾಹತುನ್ನಾಗಿ ಮಾಡೋಣ, ಜಿಲ್ಲೆಯ ಜನರ ಉದ್ಯೋಗ ಮತ್ತು ಉನ್ನತಿಗೆ ಪ್ರಕೃತಿ ಸಹಜ ಸಂಪನ್ಮೂಲಗಳು, ಇಲ್ಲಿನ ಜನರ ಕರಕುಶಲತೆ, ಗುಡಿ ಕೈಗಾರಿಕೆ ನೈಪುಣ್ಯತೆ, ಕೃಷಿ - ತೋಟಗಾರಿಕೆ ಸಾಧನೆ, ಪ್ರವಾಸೋಧ್ಯಮ ಮತ್ತು ಐತಿಹಾಸಿಕ ಹಿನ್ನಲೆ ಗಮನಿಸಿ ಉತ್ತರ ಕರ್ನಾಟಕ ಭಾಗದ 'ಕೊಪ್ಪಳಕ್ಕೆ ಬನ್ನಿ' ಎಂದು ಆಹ್ವಾನಿಸಿದರು.

'ಹೂಡಿಕೆದಾರರ ಗಮನ ಸೆಳೆಯಲು ಲ್ಯಾಂಡ್ ಆಫ್ ಅಪಾರ್ಚುನಿಟಿಸ್ ಅಭಿಯಾನ ಅತ್ಯಂತ ಮಹತ್ವದ್ದಾಗಿದೆ ಹಾಗೂ ಇದರಿಂದ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಿಂದ ಜಿಲ್ಲೆಯ ಜನರ ಅಭ್ಯುದಯವಾಗಲಿದೆ. ಇದಕ್ಕಾಗಿ ಸಮಾವೇಶದಲ್ಲಿ ಸಮರ್ಥವಾಗಿ ದಾಖಲೆಗಳನ್ನು ದೃಶ್ಯಗಳ ಮೂಲಕ ಪ್ರದರ್ಶಿಸಲಾಯಿತು' ಎಂದು ಅಮರೇಶ ಕರಡಿ ಪತ್ರಿಕೆಗೆ ತಿಳಿಸಿದರು.

'ಸಮಾವೇಶದಲ್ಲಿ ಇಸ್ರೇಲ್, ಜಪಾನ್ ದೇಶದ ಉದ್ಯಮಿಗಳು ಪಾಲ್ಗೊಂಡಿದ್ದರು. ಅವರ ಮುಂದೆ ಸಮರ್ಥವಾಗಿ ವಾದ ಮಂಡಿಸಲಾಯಿತು. ಕೌನ್ಸಿಲ್ ಸದಸ್ಯರಾಗಿ ನೇಮಕಗೊಂಡಿರುವದಕ್ಕೆ ತುಂಬಾ ಸಂತಸವಾಗಿದೆ' ಎಂದರು

ವಿದೇಶಿ ಹೂಡಿಕೆದಾರರ ವೇದಿಕೆಯ ಕೃಷ್ಣ ಕುಮಾರ್, ಇಕ್ಬಾಲ್ ಆಸೀಫ್ಮುಂತಾದ ಉದ್ಯಮಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.