ಬುಧವಾರ, ಮೇ 18, 2022
25 °C
ಜಾತ್ರೆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳ ಆಯೋಜನೆ

ಮೊಗ್ಗಿ ಬಸವೇಶ್ವರ ಜಾತ್ರೆ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ‘ಮೊಗ್ಗಿ ಬಸವೇಶ್ವರ ಜಾತ್ರೆ ಪ್ರಯುಕ್ತ ಮೇ 3 ರಿಂದ 7ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಅಮರಪ್ಪ ಕಲಬುರ್ಗಿ ತಿಳಿಸಿದರು.

ಜಾತ್ರೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು,‘ಎರಡು ವರ್ಷ ಕೋವಿಡ್ ಹರಡಿದ್ದರಿಂದ ಜಾತ್ರೆ ಆಚರಣೆ ನಿಷೇಧಿಸಲಾಗಿತ್ತು. ಈಗ ಅಂಥ ಯಾವುದೇ ಅಡೆತಡೆಗಳಿಲ್ಲದ ಕಾರಣ ಸಂಭ್ರಮದಿಂದ ಆಚರಿಸಲಾಗುವುದು’ ಎಂದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶಗೌಡ ಶಿವನಗೌಡ್ರ ಮಾತನಾಡಿ, ‘ಜಾತ್ರೆ ಪ್ರಯುಕ್ತ ವಿವಿಧ ಕ್ರೀಡೆಗಳ ಜತೆಗೆ ಉಪನ್ಯಾಸ, ಸನ್ಮಾನ, ಜೋಡೆತ್ತುಗಳ ಮೆರವಣಿಗೆ, ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಸೇರಿ ಐದು ದಿನ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ. ನಿರ್ಮಾಣ ಹಂತದಲ್ಲಿರುವ ಹೊಸ ರಥವನ್ನು ಮುಂದಿನ ವರ್ಷ ಎಳೆಯಲಾಗುವುದು’ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಶಿವನಗೌಡ ದಾನರೆಡ್ಡಿ ಮಾತನಾಡಿ, ‘ಸಂಸ್ಥೆಯ ವತಿಯಿಂದ ಮೇ 4ರಂದು ರಕ್ತದಾನ ಮತ್ತು ಉಚಿತ ನೇತ್ರ ತಪಾಸಣೆ ಶಿಬಿರ ನಡೆಯಲಿದೆ’ ಎಂದರು.

ಸಮಿತಿ ಪದಾಧಿಕಾರಿಗಳಾದ ದಾನನಗೌಡ ತೊಂಡಿಹಾಳ, ಷಣ್ಮುಖಪ್ಪ ರಾಂಪೂರು, ಬಸವರಾಜ ಅಧಿಕಾರಿ, ಬಸವಲಿಂಗಪ್ಪ ಕೊತ್ತಲ, ರೆಡ್ ಕ್ರಾಸ್ ಸಂಸ್ಥೆಯ ಡಾ.ಶಿವಕುಮಾರ ದಿವಟರ, ಶೇಖರ, ಕಲ್ಲನಗೌಡ ಓಜನಹಳ್ಳಿ, ಶರೀಫಸಾಬ ಕೊತ್ವಾಲ್ ಹಾಗೂ ರವಿ ಗುರಡ್ಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.