ಕನಕಗಿರಿ: ‘ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಯಲ್ಲಿ ಸುಮಾರು 20 ಸಾವಿರ ಶಿಕ್ಷಕರ ಕೊರತೆಯಿದೆ. ಶಿಕ್ಷಣ ಮೂಲಭೂತ ಹಕ್ಕು, ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲ. ಈ ಬಗ್ಗೆ ಯಾರೊಬ್ಬರೂ ಪ್ರಶ್ನೆ ಮಾಡುತ್ತಿಲ್ಲ’ ಎಂದು ಮಾಜಿ ಶಾಸಕ ಅಮರೇಗೌಡ ಭಯ್ಯಾಪೂರ ಬೇಸರ ವ್ಯಕ್ತಪಡಿಸಿದರು.

ಸಮೀಪದ ಹುಲಿಹೈದರ ಗ್ರಾಮದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ಎಲ್ಲವನ್ನೂ ಕೊಡುತ್ತವೆ. ಆದರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರನ್ನೇ ಕೊಡುತ್ತಿಲ್ಲ. ಪಾಲಕರು ಈ ಬಗ್ಗೆ ಪ್ರಶ್ನೆ ಮಾಡಬೇಕಿದೆ. ಇಂದಿನ ದಿನಮಾನದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಅನುದಾನ ಕೇಳುವವರು ಹೆಚ್ಚಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ವೀರೇಶ ಹಿರೇಮಠ ಮಾತನಾಡಿ, ‘ಕೊರೊನಾದಂತಹ ಕಷ್ಟ ಕಾಲದಲ್ಲಿಯೂ ಪಾಲಕರ ಸಹಕಾರದಿಂದ ಸಂಸ್ಥೆ ಸದೃಢವಾಗಿ ನಿಂತಿದೆ’ ಎಂದು ಹೇಳಿದರು.

ಅನುದಾನ ರಹಿತ ಶಾಲೆಗಳ ಸಂಘದ ತಾಲ್ಲೂಕು ಅಧ್ಯಕ್ಷ ಜಗನ್ನಾಥ ಆಲಂಪಲ್ಲಿ ಮಾತನಾಡಿ, ‘ಶಿಕ್ಷಣ ವ್ಯವಸ್ಥೆಯು ಶಿಕ್ಷಕರ ಕೈಯಲ್ಲಿನ ಚಡಿ ಕಸಿದುಕೊಂಡಿದ್ದು, ಸಮಾಜವನ್ನು ಅಪರಾಧದ ಕಡೆಗೆ
ತೆಗೆದುಕೊಂಡು ಹೋಗಲಾಗುತ್ತಿದೆ. ಪರಿಣಾಮ ಸಮಾಜದಲ್ಲಿ ಬಾಲಾಪರಾಧಗಳು ಹೆಚ್ಚುತ್ತಿವೆ. ಒಳ್ಳೆಯ ಉದ್ದೇಶಕ್ಕೆ ಶಿಕ್ಷಕರು ಮಕ್ಕಳಿಗೆ ನಿಂದಿಸಿದರೆ, ಪಾಲಕರು ಬೇಸರ ಮಾಡಿಕೊಳ್ಳಬಾರದು. ಮಕ್ಕಳ ಎದುರಿಗೆ ಶಿಕ್ಷಕರನ್ನು ನಿಂದಿಸುವುದು ಸರಿಯಲ್ಲ’ ಎಂದು ಪ್ರತಿಪಾದಿಸಿದರು.

ಗಂಗಾವತಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ರಮೇಶ ನಾಯಕ ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವೀರಭದ್ರಯ್ಯ ಹಿರೇಮಠ, ಗ್ರಾ.ಪಂ ಅಧ್ಯಕ್ಷೆ ಶರಣಮ್ಮ ಕೆಲ್ಲೂರು, ಗ್ರಾ.ಪಂ ಉಪಾಧ್ಯಕ್ಷ ಜಗದೀಶಪ್ಪ ಗದ್ದಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ವಾಗೀಶ ಹಿರೇಮಠ, ಮುಖಂಡರಾದ ಅಮರಪ್ಪ ಗದ್ದಿ, ರಾಜಾ ಶರಶ್ಚಂದ್ರ ನಾಯಕ, ನಿವೃತ್ತ ಶಿಕ್ಷಕ ಗಂಗಾಧರ ಗದ್ದಿ, ಉಪನ್ಯಾಸಕ ಶಿವಪುತ್ರಪ್ಪ ಗಳಪೂಜಿ, ಚಂದ್ರಶೇಖರ ನಾಲತ್ವಾಡ, ಎಎಸ್ಐ ಲಕ್ಕಪ್ಪ, ಶಿಕ್ಷಕ ಮಲ್ಲಿಕಾರ್ಜುನ ಹಂಪಣ್ಣವರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.