ಕನಕಗಿರಿ: ಬೋಲೆರ್ ವಾಹನವನ್ನು ಕಳ್ಳತನ ಮಾಡಿಕೊಂಡು ತಾಲ್ಲೂಕಿನ ಹುಲಿಹೈದರ ಮಾರ್ಗವಾಗಿ ತಾವರಗೇರಾ ಕಡೆಗೆ ಹೊರಟ್ಟಿದ್ದ ವಾಹನ ಚಾಲಕ 112 ತುರ್ತು ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸಹಿತ ಪರಾರಿಯಾಗಿದ್ದಾನೆ.

ಜ.12ರಂದು ಹುಲಿಹೈದರ ಹೊರವಲಯದಲ್ಲಿ ಘಟನೆ ನಡೆದಿದೆ.

ತುರ್ತು ವಾಹನದ ಪೊಲೀಸರು ತಾವರಗೇರಾ- ಕನಕಗಿರಿ ಮಾರ್ಗದಲ್ಲಿ ಕರ್ತವ್ಯದಲ್ಲಿದ್ದಾಗ, ‘ಕಳ್ಳರು ಬೋಲೆರ್ ಪಿಕ್ ಆಪ್ ಗೂಡ್ಸ್ ವಾಹನ ಕಳ್ಳತನ ಮಾಡಿಕೊಂಡು ತಾವರಗೇರಾದ ಕಡೆಗೆ ಹೋಗುತ್ತಿದ್ದಾರೆ, ಅದನ್ನು ತಡೆದು ನಿಲ್ಲಿಸಿ’ ಎಂದು ಕೊಪ್ಪಳ ಕಂಟ್ರೋಲ್ ರೂಂನಿಂದ ದೂರವಾಣಿ ಕರೆ ಬಂದಿತ್ತು. ತಕ್ಷಣ ಜಾಗೃತಿಗೊಂಡ ತುರ್ತು ವಾಹನದ ಪೊಲೀಸರು ಹುಲಿಹೈದರ ಗ್ರಾಮದ ಸ್ಮಶಾನದ ರಸ್ತೆಯಲ್ಲಿ ಕಳ್ಳತನ ಮಾಡಿಕೊಂಡು ಹೊರಟಿದ್ದ ವಾಹನ ಬರುತ್ತಿದ್ದಾಗ ಚಾಲಕನಿಗೆ ಎಡಭಾಗದಲ್ಲಿ ವಾಹನ ನಿಲ್ಲಿಸುವಂತೆ ಸನ್ನೆ ಮಾಡಿದ್ದಾರೆ. ಸಮವಸ್ತ್ರ ಧರಿಸಿದ್ದ ಪೊಲೀಸರನ್ನು ಕಂಡ ಕಳ್ಳರು ಪಕ್ಕದಲ್ಲಿದ್ದ 112 ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸಮೇತ ಪರಾರಿಯಾಗಿದ್ದಾರೆ.

ಡಿಕ್ಕಿ ರಭಸಕ್ಕೆ 112 ವಾಹನದ ಮುಂದಿನ ಸಂಪೂರ್ಣ ನಜ್ಜುಗುಜ್ಜಾಗಿದೆ.

ಜಿಲ್ಲೆಯ ಎಲ್ಲಾ ಪೊಲೀಸ್ ವಾಹನ ಕಳ್ಳರನ್ನು ಹಿಡಿಯಲು ಪ್ರಯತ್ನಿರುವದ್ದನ್ನು ಅರಿತು ಕಾರಟಗಿಯ ಎಪಿಎಂಸಿ ಆವರಣದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೆಡ್ ಕಾನ್ಸ್ಟಬಲ್ ಮುತ್ತಣ್ಣ ನೀಡಿದ ದೂರಿನ ಪ್ರಕಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.