ಕುಷ್ಟಗಿ: ನೀರಡಿಕೆಯಾದರೆ ಮಕ್ಕಳು ಊರ ಮುಂದಿನ ಕೊಳವೆಬಾವಿಗೆ ಹೋಗಬೇಕು, ಮೂತ್ರ, ಬಹಿರ್ದೆಸೆಗೆ ಬಯಲೇ ಗತಿ. ಬಿಸಿಯೂಟದ ಕೊಠಡಿ ಕಳಪೆ, ಸೋರುವ ತರಗತಿ ಕೊಠಡಿಗಳು. ಅಷ್ಟೇ ಅಲ್ಲ ಅತಿಥಿ ಶಿಕ್ಷಕರೇ ಶಾಲೆಗೆ ಆಸರೆ. ಇಂಥ ಅನೇಕ ಸಮಸ್ಯೆ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ.

ಇದು ತಾಲ್ಲೂಕಿನ ನಂದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ. ಮೂಲಸೌಲಭ್ಯ, ಕಾಯಂ ಶಿಕ್ಷಕರ ಕೊರತೆಯಿಂದ ಬಳಲುತ್ತಿರುವ ಈ ಸರ್ಕಾರಿ ಶಾಲೆಯ ದುಸ್ಥಿತಿಯ ಬಗ್ಗೆ ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆ ಗಮನಹರಿಸಿದ್ದೇ ಕಡಿಮೆ ಎಂಬ ಅಸಮಾಧಾನ ಗ್ರಾಮಸ್ಥರದು.

7ನೇ ತರಗತಿಯ ಶಾಲೆಯಲ್ಲಿ ಶಿಕ್ಷಕರು ಹೇಳುವ ಪ್ರಕಾರ 180 ಮಕ್ಕಳ ಹಾಜರಾತಿ ಇದೆ. ಶಿಕ್ಷಕರ 8 ಹುದ್ದೆಗಳು ಮಂಜೂರಾಗಿದ್ದರೆ ಮೂವರು ಕಾಯಂ ಶಿಕ್ಷಕರ ಪೈಕಿ ಕಳೆದ ತಿಂಗಳು ಒಬ್ಬ ಶಿಕ್ಷಕರು ನಿವೃತ್ತಿಯಾಗಿದ್ದಾರೆ. ನೀಲಾಂಬಿಕಾ ಎಂಬ ಶಿಕ್ಷಕಿ ವೈದ್ಯಕೀಯ ರಜೆಯಲ್ಲಿದ್ದಾರೆ. ಪವನಕುಮಾರ ಎಂಬ ಇನ್ನೊಬ್ಬ ಶಿಕ್ಷಕ ಸುಮಾರು 70 ಕಿಮೀ ದೂರದ ಕೊಪ್ಪಳದಿಂದ ನಿತ್ಯ ಇಲ್ಲಿಗೆ ಬಂದು ಹೋಗುತ್ತಾರೆ. ಉಳಿದ ನಾಲ್ವರು ಅತಿಥಿ ಶಿಕ್ಷಕರು. ಮುಖ್ಯಶಿಕ್ಷಕಿ ರಜೆಯಲ್ಲಿರುವುದರಿಂದ ಪವನಕುಮಾರ ಮೇಲೆ ಮುಖ್ಯಶಿಕ್ಷಕ ಹೊರೆ ಇದೆ. ಬಿಸಿಯೂಟ, ಕಚೇರಿ ಕೆಲಸ ಹೀಗೆ ಒತ್ತಡ ಸಹಜ. ಆದರೆ ಅವರು ಕೊಪ್ಪಳದಿಂದ ಬರುವುದೂ ತಡ. ಹಾಗಾಗಿ ಈ ಶಾಲೆಯ ಮಕ್ಕಳ ಶೈಕ್ಷಣಿಕ ಭವಿಷ್ಯ ನಿಂತಿರುವುದು ಬಹುತೇಕ ಅತಿಥಿ ಶಿಕ್ಷಕರ ಮೇಲೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಖಾತರಿ ಇಲ್ಲ ಎಂದೆ ಗ್ರಾಮಸ್ಥರು.

ಸೌಲಭ್ಯ ಮರೀಚಿಕೆ: ಮೂಲಸೌಲಭ್ಯಗಳ ಕೊರತೆ ಹೇಳತೀರದ್ದು. ಶಾಲಾ ಕಚೇರಿ ಸೇರಿ ನಾಲ್ಕೈದು ತರಗತಿ ಕೊಠಡಿಗಳಿದ್ದು ಅವುಗಳ ಪೈಕಿ ಮಳೆ ಬಂದರೆ ಎರಡು ಸೋರುತ್ತವೆ. ಬಿಸಿಯೂಟದ ಕೋಣೆಯ ತಗಡಿನ ಶೀಟ್ಗಳು ಯಾವಾಗ ಹಾರುತ್ತವೆಯೊ ಗೊತ್ತಿಲ್ಲ. ಸಾಮಗ್ರಿಗಳನ್ನು ಇಟ್ಟುಕೊಳ್ಳುವುದಕ್ಕೆ ಜಾಗವೂ ಇಲ್ಲ. ಇದ್ದೊಂದು ಶೌಚಾಲಯ ಬಳಕೆ ಇಲ್ಲ. ಬಹಿರ್ದೆಸೆಗೆ ಮಕ್ಕಳು ಬಯಲಿಗೆ ಹೋಗುತ್ತಾರೆ. ಇಷ್ಟೊಂದು ಅವ್ಯವಸ್ಥೆ ಇಲ್ಲಿ ತಾಂಡವಾಡುತ್ತಿದ್ದರೂ ಸಮಸ್ಯೆಗಳ ಪರಿಹಾರಕ್ಕೆ ಯಾರೂ ಯತ್ನಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ನೀರಿಗೆ ಊರ ಮುಂದಿನ ಬೋರೇ ಗತಿ

ಶಾಲೆ ಮಕ್ಕಳಿಗೆ ಕುಡಿಯುವ ನೀರಿಗೂ ಇಲ್ಲಿ ಬರ ಇದೆ. ನೀರಡಿಕೆಯಾದರೆ ಮತ್ತು ಮಧ್ಯಾಹ್ನ ಬಿಸಿಯೂಟದ ನಂತರ ಮಕ್ಕಳು ಊರ ಮುಂದಿರುವ ಬೋರಿಗೆ ಹೋಗುವ ಅನಿವಾರ್ಯತೆ ಇದೆ. ಅಪಾಯ ಲೆಕ್ಕಿಸದೆ ಮಕ್ಕಳು ಗುಂಪು ಗುಂಪಾಗಿ ರಸ್ತೆ ದಾಟಿ ಹೋಗಬೇಕು. ಶಾಲೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ ಎಂದು ವರ್ಷದಿಂದಲೂ ಮನವಿ ಮಾಡುತ್ತ ಬಂದರೂ ನಿರ್ಲಕ್ಷ್ಯವಹಿಸಿರುವ ಜುಮಲಾಪುರ ಗ್ರಾಮ ಪಂಚಾಯಿತಿಗೆ ಮಕ್ಕಳ ಬಗ್ಗೆ ಕಳಕಳಿಯೇ ಇದ್ದಂತಿಲ್ಲ. ಅಷ್ಟೇ ಅಲ್ಲ ಬಿಸಿಯೂಟದ ಕೊಠಡಿ ದುರಸ್ತಿಗೂ ಮುಂದಾಗಿಲ್ಲ. ಇಂಥ ಅವ್ಯವಸ್ಥೆ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡಿದೆ ಎಂಬುದು ಗ್ರಾಮಸ್ಥರ ಅಸಮಾಧಾನ.

ಹತ್ತು ಶಾಲೆಗಳಿಗೆ ಶಿಕ್ಷಕರೇ ಇಲ್ಲ

ಮಂಜೂರಾದ ಹುದ್ದೆಗಳಿವೆಯಾದರೂ ತಾಲ್ಲೂಕಿನಲ್ಲಿ 97 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ಸುಮಾರು 10 ಶಾಲೆಗಳಿಗೆ ಶಿಕ್ಷಕರೇ ಇಲ್ಲ. ಅಕ್ಕಪಕ್ಕದ ಶಾಲೆಗಳ ಶಿಕ್ಷಕರು ಅತಿಥಿ ಶಿಕ್ಷಕರಿಗೆ ಜವಾಬ್ದಾರಿ ವಹಿಸಲಾಗಿದೆ. ಈ ಸಮಸ್ಯೆ ಮೇಲಧಿಕಾರಿಗಳ ಗಮನದಲ್ಲಿಯೂ ಇದೆ. ಬಿಸಯೂಟದ ಕೊಠಡಿಗಳ ದುರಸ್ತಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎನ್ನುತ್ತಾರೆ ಬಿಇಒ ಸುರೇಂದ್ರ ಕಾಂಬಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.