ಶುಕ್ರವಾರ, ಡಿಸೆಂಬರ್ 4, 2020
24 °C
ವಿವಿಧೆಡೆ ಕರ್ನಾಟಕ ರಾಜ್ಯೋತ್ಸವ ಆಚರಣೆ

ಭಾಷಾಭಿಮಾನ ಬೆಳೆಸಿಕೊಳ್ಳಲು ಸಲಹೆ: ಪಿಎಸ್ಐ ಎಚ್.ಎಸ್.ಪ್ರಶಾಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಗಿರಿ: ಹಿರಿಯರ ತ್ಯಾಗ, ಪರಿಶ್ರಮ, ಹೋರಾಟ, ಉದಾತ್ತ ಚಿಂತನೆಯ ಫಲವಾಗಿ ಕನ್ನಡಿಗರು ಇಂದು ರಾಜ್ಯೋತ್ಸವದ ಸಂಭ್ರಮ ಕಾಣುವಂತಾಗಿದೆ ಎಂದು ಪಿಎಸ್ಐ ಎಚ್.ಎಸ್.ಪ್ರಶಾಂತ ತಿಳಿಸಿದರು.

ಇಲ್ಲಿನ ಗೋರಳಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಡಿನ ಕಲೆ, ಪರಂಪರೆ, ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವಕರ ಮೇಲಿದೆ ಎಂದು ತಿಳಿಸಿದರು.

ತಹಶೀಲ್ದಾರ್ ರವಿ ಅಂಗಡಿ, ಉಪ ಪ್ರಾಂಶುಪಾಲ ಜಗದೀಶ ಹಾದಿಮನಿ ಮಾತನಾಡಿದರು.

ಕಸಾಪ ತಾಲ್ಲೂಕು ಅಧ್ಯಕ್ಷ ಮೆಹಬೂಬಹುಸೇನ, ಗೌರವ ಕಾರ್ಯದರ್ಶಿಗಳಾದ ಪರಸಪ್ಪ ಹೊರಪೇಟೆ, ಸಿದ್ದಮ್ಮ ಮಾಳಿಗೆ, ಪ್ರಮುಖರಾದ ವಿರುಪಣ್ಣ ಕಲ್ಲೂರು, ಸಣ್ಣ ಕನಕಪ್ಪ, ಶಿಕ್ಷಕರಾದ ಶಿವಾನಂದ ಬೆಲ್ಲದ, ಶಂಶಾದಬೇಗ್ಂ ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಶರಣಬಸಪ್ಪ ಭತ್ತದ, ಮುಖ್ಯಾಧಿಕಾರಿ ಎಂ. ತಿರುಮಲಮ್ಮ, ಪ್ರಾಂಶುಪಾಲ ಬಸವರಾಜ ಬಡಿಗೇರ, ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ರಾಜೀವ ಎಂ.ಆರ್, ಎಸ್‌ಡಿಎಂಸಿ ಅಧ್ಯಕ್ಷ ದುರಗಪ್ಪ ಬಸರಿಗಿಡದ , ಶಿಕ್ಷಕರಾದ ದ್ರಾಕ್ಷಾಯಿಣಿ, ಜ್ಯೋತಿ ಮ್ಯಾಗೇರಿ, ಕಸಾಪ ಪದಾಧಿಕಾರಿಗಳಾದ ಕನಕರೆಡ್ಡಿ ಕೆರಿ, ತಿಪ್ಪಣ್ಣ ಮಡಿವಾಳರ, ಕನಕಪ್ಪ ನಾಯಕ, ರಮೇಶರಡ್ಡಿ ಓಣಿಮನಿ, ಆನಂದ ಭತ್ತದ, ರವಿ ಪಾತ್ರದ, ಷರೀಪ ವಟಪರ್ವಿ, ಅಮರೇಶ ಪಟ್ಟಣಶೆಟ್ಟಿ ಹಾಗೂ ವಿನಯ ಮರಾಠಿ ಇದ್ದರು.

ತಹಶೀಲ್ದಾರ್ ಕಚೇರಿ: ಇಲ್ಲಿನ ತಹಶೀಲ್ದಾರ್ ಕಚೇರಿ ಮುಂದೆ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ತಹಶೀಲ್ದಾರ್ ರವಿ ಅಂಗಡಿ ನೆರವೇರಿಸಿದರು. ತಾ.ಪಂ ಸದಸ್ಯ ಬಸವರಾಜಸ್ವಾಮಿ ಹಿರೇಮಠ, ಪಟ್ಟಣ ಪಂಚಾಯಿತಿ ಸದಸ್ಯ ಶರಣಬಸಪ್ಪ ಭತ್ತದ, ಉಪನ್ಯಾಸಕ ಇಮಾಮಸಾಹೇಬ ಹಡಗಲಿ ಮಾತನಾಡಿದರು. ಕಸಾಪ ಅಧ್ಯಕ್ಷ ಮೆಹಬೂಬಹುಸೇನ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಪರಸಪ್ಪ , ಪ. ಪಂ ಸದಸ್ಯರಾದ ಹುಲಗಪ್ಪ ವಾಲೇಕಾರ, ರವಿ ಭಜಂತ್ರಿ, ಮಹ್ಮದಪಾಷ, ಮಂಜುನಾಥರೆಡ್ಡಿ ಮಾದಿನಾಳ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಧುಸೂದನ ಅರ್ಚಕ, ಕನ್ನಡ ಪರ ಸಂಘಟನೆಗಳ ಪ್ರಮುಖರಾದ ಅನಿಲಕುಮಾರ, ಶರಣಪ್ಪ, ರಾಜು, ಹರೀಶ ಹಾಗೂ ಅಧಿಕಾರಿಗಳು ಇದ್ದರು. ಪ್ರಭುಲಿಂಗ ವಸ್ತ್ರದ ನಿರೂಪಿಸಿದರು.

ಬಿಜೆಪಿ ಕಚೇರಿ ಕಚೇರಿ: ನವಲಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಮಹಾಂತೇಶ, ಪ್ರಧಾನ ಕಾರ್ಯದರ್ಶಿ ವಾಗೀಶ ಮಾತನಾಡಿದರು. ಪ.ಪಂ ಸದಸ್ಯ ರವೀಂದ್ರ ಸಜ್ಜನ್, ಸುರೇಶ, ಶರಣಪ್ಪ, ಹನುಮಂತಪ್ಪ, ಹುಲಿಗೆಮ್ಮ, ಕೃಷ್ಣಾವೇಣಿ, ಅಶ್ವಿನಿ, ರಾಚಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.