ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಕರ್ನಾಟಕ ರಾಜ್ಯೋತ್ಸವ ಆಚರಣೆ

Last Updated 2 ನವೆಂಬರ್ 2021, 11:14 IST
ಅಕ್ಷರ ಗಾತ್ರ

ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಸೋಮವಾರ ಕರ್ನಾಟಕ ರಾಜೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಅಮರೇಶ ಗಲಗಲಿ, ಎಸ್.ಎಸ್.ಅರಳಿ, ಚಿದಾನಂದಪ್ಪ ಕಂದಗಲ್, ಶ್ಯಾಮೂರ್ತಿ ಶಿರವಾರ, ರವಿ ಬಳಿಗೇರ, ಮೌಲಾಸಾಬ ಮುನಿಯಾರ್, ಬಸವರಜ ದೇವರಮನಿ, ಎಂ.ಡಿ.ರಫಿ, ಪಿ. ವೈ.ದಾಸರ ಇದ್ದರು.

ಪ.ಪಂ ಕಾರ್ಯಲಯದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.

ಪ.ಪಂ ಮುಖ್ಯಾಧಿಕಾರಿ ಪ್ರಹ್ಲಾದ್ ಜೋಶಿ, ಪ್ರಾಣೇಶ ಬಳ್ಳಾರಿ, ಶ್ಯಾಮೂರ್ತಿ ಕಟ್ಟಿಮನಿ, ಶರಣಬಸವ ಸೈಂದರ್, ಮಾರೇಶ, ರಾಘವೇಂದ್ರ ಇದ್ದರು.

ನಾಡ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.

ಗ್ರಾಮಲೇಕ್ಕಿಗರಾದ ಸೂರ್ಯಕಾಂತ, ಶ್ರೀಶೈಲ ಮಲ್ಲಿಕಾರ್ಜುನ, ಹುಸೇನಪ್ಪ, ಮುರ್ತುಜಾಸಾಬ ನಾಡಗೌಡ ಸಿಬ್ಬಂದಿ ಇದ್ದರು.

ಪೊಲೀಸ್ ಠಾಣೆಯಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಪಿಎಸ್‌ಐ ವೈಶಾಲಿ ಝಳಕಿ, ಎಎಸ್‌ಐ ಮಲ್ಲಪ್ಪ ವಜ್ರದ, ಆನಂದ, ಬಸವರಾಜ ಇಂಗಳದಾಳ, ಬಸವರಾಜ ನಾಯಕವಾಡಿ, ರಾಜು, ಎಚ್.ಸಿ.ಮೇಟಿ, ಶಂಕರ್ ಹೆಬ್ಬುಲಿ ಇದ್ದರು.

ಕರ್ನಾಟಕ ನವ ನಿರ್ಮಾಣ ಸೇನೆಯ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಮುಖಂಡರಾದ ಶಂಭನಗೌಡ ಪೊಲೀಸ್ ಪಾಟೀಲ್, ಎನ್ ಶ್ಯಾಮೀದ್, ಸಂಘಟಿಕರಾದ ಸಿದ್ಧನಗೌಡ ಪುಂಡಗೌಡ್ರು, ನಬೀಸಾಬ್ ನವಲಿ, ಸಲೀಂ ನಾಯಕ್, ಜಗ್ಗು ಬಿಳೇಗುಡ್ಡ, ಹನುಮೇಶ ಪುಂಡಗೌಡ್ರು, ವೆಂಕಟೇಶ್ ಯಾದವ್, ಲಾಲಸಾಬ್, ಅಭಿ, ಮಣಿ ಇದ್ದರು

ಶ್ರೀಶ್ಯಾಮೀದ್ ಅಲಿ ವೃತ್ತದಲ್ಲಿ ಶ್ರೀಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕರ್ನಾಟಕ ಧ್ವಜಾರೋಹಣ ಮಾಡುವ ಮೂಲಕ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.

ಎಎಸ್ ಐ ಮಲ್ಲಪ್ಪ ವಜ್ರದ, ಪಪಂ ಮುಖ್ಯಾಧಿಕಾರಿ ಪ್ರಹ್ಲಾದ್ ಜೋಶಿ, ಕೆಇಬಿ ಜೆಇ ರಶ್ಮೀ ಚವ್ಹಾಣ್, ಮುಖಂಡರಾದ ಶಂಭನಗೌಡ ಪೊಲೀಸ್, ಪಾಟೀಲ್, ಸಾಗರ ಭೇರಿ, ಸಂತೋಷ ಸರನಾಡಗೌಡ್ರು, ಕನ್ನಡ ಸೇನೆ ಕರ್ನಾಟಕ ಸಂಘಟಿಕರಾದ ಅಮರೇಶ ಕುಂಬಾರ, ಫಯಾಜ್ ಬನ್ನು, ಚನ್ನಮಲ್ಲಪ್ಪ ಕುಂಬಾರ, ಶಿವನಗೌಡ ಗುಡದೂರು, ನಾರಾಯಣಸಿಂಗ್ ಬಳ್ಳಾರಿ, ಕಲೀಂ ಮುಜಾವಾರ್, ಅರುಣ್ ನಾಲತವಾಡ ಸೇರಿದಂತೆ ಕನ್ನಡಭಿಮಾನಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT