ಬುಧವಾರ, ನವೆಂಬರ್ 30, 2022
16 °C

ಕೊಪ್ಪಳ: ಭಗತ್‌ಸಿಂಗ್‌ ಜನ್ಮದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ನಗರದ ಸರ್ವೋದಯ ಐಟಿಐ ಕಾಲೇಜಿನಲ್ಲಿ ಬುಧವಾರ ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ಭಗತ್‌ಸಿಂಗ್‌ ಅವರ 115ನೇ ಜನ್ಮದಿನ ಆಚರಿಸಲಾಯಿತು.

ಸಂಘಟನೆಯ ರಾಜ್ಯ ನಾಯಕ ಶರಣು ಗಡ್ಡಿ ಮಾತನಾಡಿ ‘ಭಾರತದ ಸ್ವಾತಂತ್ರ್ಯ ಹೋರಾಟದ ಚಳವಳಿಯ ಕ್ರಾಂತಿಕಾರಿಗಳಲ್ಲಿ ಸಮಾನತೆ, ವರ್ಗ ಸಂಘರ್ಷದ ಸಿದ್ದಾಂತವನ್ನು ಅರ್ಥಮಾಡಿಕೊಂಡು ಸ್ವಾತಂತ್ರವೆಂದರೆ ಕೇವಲ ಯಜಮಾನರ ಬದಲಾವಣೆಯಲ್ಲ. ಬಿಳಿ ಸಾಹೇಬರು ಕುಳಿತ ಜಾಗದಲ್ಲಿ ಕರಿ ಸಾಹೇಬರು ಕುಳಿತುಕೊಳ್ಳುವುದಲ್ಲ ಎಂದು ನಂಬಿಕೊಂಡಿದ್ದರು’ ಎಂದರು.

ಕಾಲೇಜಿನ ಉಪನ್ಯಾಸಕರಾದ ಮಹಮ್ಮದ್ ಶಫಿ, ಶಾಂತವೀರ, ಯಮನೂರ, ಸಂಘಟನೆಯ ಜಿಲ್ಲಾ ಅಧ್ಯಕ್ಷ ರಮೇಶ್ ವಂಕಲಕುಂಟಿ, ಕಾರ್ಯಕರ್ತರಾದ ಮಹಾಂತೇಶ್ ಮೇಟಿ, ಸಂಗಮೇಶ ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.