ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಶಾಸಕ ರಾಯರಡ್ಡಿಗೆ ಮಸಿ ಬಳಿಯುವ ಹೇಳಿಕೆ; ಕ್ಷಮೆಯಾಚನೆಗೆ ಪಟ್ಟು

Published 4 ಆಗಸ್ಟ್ 2023, 5:52 IST
Last Updated 4 ಆಗಸ್ಟ್ 2023, 5:52 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಮಸಿ ಬಳಿಯುವುದಾಗಿ ಹೇಳಿರುವ ಜೆಡಿಎಸ್ ಮುಖಂಡ ಮಲ್ಲನಗೌಡ ಕೋನನಗೌಡ ಶನಿವಾರದ (ಆ. 5) ಒಳಗೆ ಕ್ಷಮೆ ಕೇಳಬೇಕು. ಇಲ್ಲವಾದರೆ ನಾವೇ ಕೋನನಗೌಡ ಮುಖಕ್ಕೆ ಮಸಿ ಬಳಿಯುತ್ತೇವೆ ಎಂದು ರಾಯರಡ್ಡಿ ಸಾಹೇಬರ ಅಭಿಮಾನ ಬಳಗದ ಮುಖಂಡ ಹನುಮೇಶ ಕಡೆಮನಿ ಎಚ್ಚರಿಕೆ ನೀಡಿದರು.

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 500 ಮತಗಳನ್ನು ಪಡೆಯಲಾಗದ ಕೋನನಗೌಡ ಹಿರಿಯ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿದ್ದು ಯಾಕೆ. ರಾಯರಡ್ಡಿ ಅವರು ಬಳಸಿದ ಪದಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬಹುದಿತ್ತು. ಆದರೆ ಮಸಿ ಬಳಿಯುವ ಬಗ್ಗೆ ಮಾತನಾಡಿದ್ದು ಸರಿಯಲ್ಲ ಎಂದು ಇಲ್ಲಿ ಶುಕ್ರವಾರ ‌ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಾಜಕಾರಣದಲ್ಲಿ ಅದೃಷ್ಟವೂ ಮುಖ್ಯವಾಗುತ್ತದೆ ಎಂದು ರಾಯರಡ್ಡಿ ಅವರು ಭಾಷಣದಲ್ಲಿ ಮಾರ್ಮಿಕವಾಗಿ ಹೇಳಿದ್ದರು. ಇದನ್ನೇ ‌ಬಂಡವಾಳ ಮಾಡಿಕೊಂಡು ಕೋನನಗೌಡ ಶಾಸಕರಿಗೆ ಮಸಿ ಬಳಿಯುವುದಾಗಿ ಹೇಳುವುದು ಸರಿಯೇ? ಎಂದು ಪ್ರಶ್ನಿಸಿದರು.

ಕೋನನಗೌಡ ‌ನಾಳೆಯೊಳಗೆ ರಾಯರಡ್ಡಿ ಅವರ ಬಳಿ ಕ್ಷಮೆ ಕೇಳಬೇಕು, ಇಲ್ಲವಾದರೆ ಕೋನನಗೌಡನ ಮುಂದೆ ಶಾಸಕರನ್ನು ಕರೆದುಕೊಂಡು ಹೋಗುತ್ತೇವೆ. ಧೈರ್ಯವಿದ್ದರೆ ಕೋನನಗೌಡ ಮಸಿ ಬಳಿಯಲಿ ಎಂದು ಸವಾಲು ಹಾಕಿದರು.

ಆಗಿದ್ದೇನು?

ರಾಯರಡ್ಡಿ ಅವರು ಎಚ್.ಡಿ. ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿರುವ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲವಾದರೆ ಅವರಿಗೆ ಕಪ್ಪು‌ ಮಸಿ ಬಳಿಯುತ್ತೇವೆ ಎಂದು ಮಲ್ಲನಗೌಡ ಕೋನನಗೌಡ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದಲ್ಲಿ ನಡೆದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ರಾಯರಡ್ಡಿ ಅವರು ದೇವೇಗೌಡ ಕ್ಯಾಬಿನೆಟ್ ನಲ್ಲಿ‌ ಸಚಿವನಾಗಿದ್ದೆ. ಕುಮಾರಸ್ವಾಮಿ ನನ್ನ ಪಕ್ಕದಲ್ಲಿ ‌ಬಂದು ನಿಲ್ಲಲು ಹೆದರುತ್ತಿದ್ದ ಎಂದು ಹೇಳಿದ್ದರು. ಇದು ಇಬ್ಬರೂ ‌ನಾಯಕರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT