ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ಕೊಡಬಾರದು ಎಂದು ಒಂದೆಡೆ ಬಲ್ಡೋಟಾ ಆರಂಭಕ್ಕೆ ಅವಕಾಶ ಕೊಡಬೇಕು ಎಂದು ಮತ್ತೊಂದೆಡೆ ಕೊಪ್ಪಳದಲ್ಲಿ ಪ್ರತ್ಯೇಕವಾಗಿ ಅನಿರ್ದಿಷ್ಟ ಹೋರಾಟಗಳು ನಡೆಯುತ್ತಿವೆ. ಕಾರ್ಖಾನೆಗಳ ಸ್ಥಾಪನೆ ವಿರೋಧಿ ಹೋರಾಟಕ್ಕೆ ಶುಕ್ರವಾರ (ಡಿ. 19) 50 ದಿನಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಗಳ ಬಾಧಿತ ಗ್ರಾಮಗಳಲ್ಲಿರುವ ಪರಿಸ್ಥಿತಿ ಬಗ್ಗೆ ‘ಪ್ರಜಾವಾಣಿ’ ಸಿದ್ಧಪಡಿಸಿದ ಸಾಕ್ಷಾತ್ ವರದಿ ಇಲ್ಲಿದೆ.
ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿದ್ದೇವೆ ಎಂದು ಹೇಳುತ್ತಿರುವ ಕಾರ್ಖಾನೆಗಳು ಕೂಡ ಹೆಚ್ಚು ಮಾಲಿನ್ಯ ಮಾಡುತ್ತಿವೆ. ನಮ್ಮ ಹೊಲದ ಸುತ್ತಲು ಕೆಲ ಹೊತ್ತು ಇದ್ದರೆ ಉಗುಳು ಕೂಡ ಕಪ್ಪಾಗುತ್ತದೆ.
ಮುತ್ತಪ್ಪ ಹಾಲವರ್ತಿ, ಗ್ರಾಮದ ರೈತ
ಮನೆಯಲ್ಲಿ ಒಪ್ಪೊತ್ತಿನ ಊಟ ಮಾಡಿಕೊಂಡಾದರೂ ಮಗಳು ಮೊಮ್ಮಕ್ಕಳು ಕಣ್ಣಮುಂದೆಯೇ ಇರಲಿ. ಮಾಲಿನ್ಯ ವ್ಯಾಪಕವಾಗಿರುವ ಊರಿಗೆ ಹೋಗುವುದು ಮಾತ್ರ ಬೇಡ
ಪ್ರಮೀಳಾ ಕೊಪ್ಪಳದ ನಿವಾಸಿ
ಮಾಲಿನ್ಯ ನಿಯಂತ್ರಣದ ಬಗ್ಗೆ ಮಂಡಳಿಯಲ್ಲಿ ಅಧ್ಯಯನ ವರದಿಯ ಸಮಾಲೋಚನೆ ನಡೆಯುತ್ತಿದೆ. ಬಳಿಕ ಕೇಂದ್ರ ಕಚೇರಿಯಿಂದ ಬರುವ ನಿರ್ದೇಶನದ ಅನ್ವಯ ಕ್ರಮ ವಹಿಸಲಾಗುವುದು.