ಅಳವಂಡಿ ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಿವೃತ್ತ ಶಿಕ್ಷಕ ಕಾಶೀನಾಥ್ ಹಿರೇಮಠ ಅವರು ಕನ್ನಡ ವಿಷಯದ ಪಾಠ ಮಾಡುತ್ತಿರುವುದು.
ಎಲ್ಲಾ ವೃತ್ತಿಗಿಂತ ಶಿಕ್ಷಕರ ವೃತ್ತಿ ಪವಿತ್ರ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ನಿವೃತ್ತಿಗೊಂಡರೂ ಮತ್ತೆ ಸೇವೆಯಲ್ಲಿ ತೊಡಗಿರುವೆ. ಮತ್ತೆ ಮಕ್ಕಳೊಂದಿಗೆ ಬೆರೆಯುತ್ತಿರುವುದು ಖುಷಿ ತಂದಿದೆ. ಹೆಚ್ಚಿನ ಸೇವೆ ಮಾಡಲು ಯಾವುದೇ ಹಣ ಪಡೆಯುತ್ತಿಲ್ಲ.
– ಕಾಶೀನಾಥ್ ಹಿರೇಮಠ, ನಿವೃತ್ತ ಕನ್ನಡ ಶಿಕ್ಷಕ
ನಿವೃತ್ತ ಶಿಕ್ಷಕ ಕಾಶೀನಾಥ್ ಹಿರೇಮಠ ಅವರು ನಮ್ಮ ಮನವಿಗೆ ಸ್ಪಂದಿಸಿ ಶಾಲೆಗೆ ಬಂದು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಕನ್ನಡ ವಿಷಯದಲ್ಲಿ ಮಕ್ಕಳಿಗೆ ಅನುಕೂಲವಾಗಿದೆ. ಎಸ್‌ಡಿಎಂಸಿ ಹಾಗೂ ಶಿಕ್ಷಕರು ಅವರಿಗೆ ಸಾಥ್ ನೀಡುತ್ತಿದ್ದೇವೆ.