ಕೊಪ್ಪಳ: ಶ್ರೀನಗರ ಪ್ರವಾಸ ಕೈಗೊಂಡಿರುವ ಕೊಪ್ಪಳದ ನಾಲ್ಕು ಕುಟುಂಬಗಳ 19 ಜನ ಸದಸ್ಯರು ಸುರಕ್ಷಿತವಾಗಿದ್ದಾರೆ.

ಕೊಪ್ಪಳದ ಸಿದ್ದು ಗಣವಾರಿ, ಉದ್ಯಮಿ ಶರಣಪ್ಪ ಸಜ್ಜನ, ಕಾಂಗ್ರೆಸ್ ಮುಖಂಡ ಕಾಟನ್ ಪಾಷಾ ಮತ್ತು ಶಿವಕುಮಾರ ಪಾವಲಿ ಶೆಟ್ಟರ್ ಕುಟುಂಬ ಸದಸ್ಯರ ಜೊತೆ ಮಂಗಳವಾರ ಸಂಜೆ ಮುಂಬೈನಿಂದ ಶ್ರೀನಗರಕ್ಕೆ ತೆರಳಿದ್ದಾರೆ. ಘಟನೆ ತಿಳಿದು ಆತಂಕಗೊಂಡಿದ್ದು ಪ್ರವಾಸ ಮುಂದುವರಿಸಬೇಕೇ, ವಾಪಸ್ ಬರಬೇಕೇ? ಎನ್ನುವ ಗೊಂದಲದಲ್ಲಿದ್ದಾರೆ. ಭಯೋತ್ಪಾದಕರ ದಾಳಿ ನಡೆದ ಸ್ಥಳದಿಂದ ಶ್ರೀನಗರ 100 ಕಿ.ಮೀ. ದೂರದಲ್ಲಿದೆ.

‘ಮಂಗಳವಾರ ಸಂಜೆ 6.30ರ ಸುಮಾರಿಗೆ ಶ್ರೀನಗರ ತಲುಪಿ ಹೋಟೆಲ್ಗೆ ಬಂದ ಬಳಿಕ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ದುರ್ಘಟನೆ ನಡೆದಿದ್ದು ಗೊತ್ತಾಯಿತು. ಆಗಿನಿಂದ ಹೋಟೆಲ್ನಲ್ಲಿಯೇ ಉಳಿದುಕೊಂಡಿದ್ದೇವೆ. ಐದು ದಿನಗಳ ಪ್ರವಾಸಕ್ಕಾಗಿ ಬಂದಿದ್ದೇವೆ. ಮುಂದೇನು ಮಾಡಬೇಕು ಎನ್ನುವುದನ್ನು ನಿರ್ಧರಿಸಿಲ್ಲ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಬರುತ್ತಿದ್ದಾರೆ ಎನ್ನುವ ಮಾಹಿತಿ ಗೊತ್ತಾಗಿದೆ. ಅವರನ್ನು ಭೇಟಿಯಾಗುತ್ತೇವೆ’ ಎಂದು ಶ್ರೀನಗರಕ್ಕೆ ತೆರಳಿರುವ ಕೊಪ್ಪಳ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಾಟನ್ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

ಶ್ರೀನಗರದಲ್ಲಿರುವ ಕೊಪ್ಪಳದ ನಿವಾಸಿಗಳು ಸುರಕ್ಷಿತವಾಗಿದ್ದಾರೆ. ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಹೇಳಿದರು.
.Terror Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: 28 ಮಂದಿ ಸಾವು.ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ಸೌದಿ ಪ್ರವಾಸ ಮೊಟಕುಗೊಳಿಸಿ ಮೋದಿ ವಾಪಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.