ಕೊಪ್ಪಳ: ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರಾರ್ಥನಾ ಸಭೆ ಆಯೋಜಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಉಸ್ತುವಾರಿ ನಾಗಮಣಿ ಜಿಂಕಲ್ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ನಾಯಕ ಮಾತನಾಡಿ, ಮಧ್ಯರಾತ್ರಿ ಮಹಿಳೆ ನಿರ್ಭಯವಾಗಿ ನಡೆದುಕೊಂಡು ಹೋಗುವುದೇ ಸ್ವಾತಂತ್ರ್ಯ ಎಂದು ಗಾಂಧೀಜಿ ಕಂಡ ನನಸನ್ನು ಮಹಿಳೆಯರು ರಾತ್ರಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಇಲ್ಲಿ ನನಸು ಮಾಡಿದ್ದಾರೆ ಎಂದರು.
ರಾಜ್ಯ ಮಾಧ್ಯಮ ವಿಶ್ಲೇಷಕಿ ಶೈಲಜಾ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳರವರ ನೇತೃತ್ವದಲ್ಲಿ ಭಜನೆ, ಪ್ರಾರ್ಥನೆ ನಡೆಯಿತು.ರಘುಪತಿ ರಾಘವ ರಾಜಾ ರಾಂ ಗೀತೆಯೊಂದಿಗೆ ಬೆಳಗಿನ ಜಾವದವರೆಗೆ ಪ್ರಾರ್ಥನೆ ಮಾಡಲಾಯಿತು.
ಗ್ರಾಮೀಣ ಬ್ಲಾಕ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಿಬಿ, ರಶ್ಮಿ ರಾಜಶೇಖರ್ ಹಿಟ್ನಾಳ್ ಮುಂತಾದವರು ಭಾಗವಹಿಸಿದ್ದರು.ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರ ಅಧ್ಯಕ್ಷತೆ ವಹಿಸಿದ್ದರು.
ವಿಶಾಲಾಕ್ಷಿ ತಾವರಗೇರಿ, ವೀರೇಶ ತಾವರಗೇರಿ, ಮಂಜುನಾಥ ಜಿ. ಗೊಂಡಬಾಳ, ಗವಿಸಿದ್ದಪ್ಪ ಪಾಟೀಲ್, ರಾಜು ಕಾತರಕಿ, ಶಿವರಡ್ಡಿ ಭೂಮಕ್ಕನವರ, ಶೀಲಾ ಹಾಲ್ಕುರಕಿ, ಸವಿತಾ ಗೋರಂಟ್ಲಿ, ರಜಿಯಾಬೇಗಂ, ಜಯಶ್ರೀ ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.