ಗುರುವಾರ , ಜನವರಿ 23, 2020
26 °C
ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ: ಭಕ್ತ‌ ಹಿತ ಚಿಂತನ ಸಭೆ

ಕೀಳರಿಮೆ ತೊರೆದರೆ ಸಾಧನೆ ಸಾಧ್ಯ: ರವಿ ಡಿ ಚೆನ್ನಣ್ಣನವರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಉತ್ತರ ಕರ್ನಾಟಕ ಭಾಗದ ಯುವಕರು ತಮ್ಮ ಬಗ್ಗೆ ಇರುವ ಕೀಳರಿಮೆ ತೊರೆದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಐಪಿಎಸ್‌ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್ ಅಭಿಪ್ರಾಯಪಟ್ಟರು.

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕೈಲಾಸ ಮಂಟಪದಲ್ಲಿ ಮಂಗಳವಾರ ನಡೆದ ಭಕ್ತ ಹಿತ ಚಿಂತನ ಸಭೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಹಿಂದುಳಿದ ಭಾಗ, ಕೃಷಿಕ ಕುಟುಂಬ, ಇಂಗ್ಲಿಷ್‌ ಬರುವುದಿಲ್ಲ ಎಂಬ ಕೀಳರಿಮೆಯಿಂದ ನಮ್ಮ ಭಾಗದ ವಿದ್ಯಾರ್ಥಿಗಳು ಸಾಧನೆ ಮಾಡಲು ತೊಡಕಾಗುತ್ತದೆ. ಆದರೆ ಇವು ಯಾವವೂ ಸಾಧನೆ ಮಾಡಲು ಅಡ್ಡಿಯಾಗುವುದಿಲ್ಲ. ಇಚ್ಛಾಶಕ್ತಿ, ಸತತ ಕೆಲಸ ಮಾಡುವ ಮನೋಭಾವನೆ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೊಪ್ಪಳದ ಗವಿಮಠದ ಜಾತ್ರೆ ನನಗೆ ಅನೇಕ ಪಾಠಗಳನ್ನು ಕಲಿಸಿದೆ. ಶ್ರೇಷ್ಠತೆ ಎಂಬುವುದು ಕೆಲಸದಲ್ಲಿ ಇಲ್ಲ. ನಾವು ಪ್ರೀತಿಸುವ ಕಾಯಕದಲ್ಲಿ ಶ್ರೇಷ್ಠತೆ ಇದೆ. ಅದಕ್ಕೆ ಬಸವಣ್ಣನವರು ಕಾಯಕಕ್ಕೆ ಮಹತ್ವ ನೀಡಿದ್ದಾರೆ. ಅದನ್ನೇ ನಮ್ಮ ಗುರು ಪಟ್ಟಣ ಸರ್ ಕಲಿಸಿದ್ದಾರೆ. ಇದರಿಂದ ನಮ್ಮ ಬದುಕಿನಲ್ಲಿ ಕೀಳರಿಮೆ ಬರುವುದಿಲ್ಲ. ಕೆಲಸದ ಮೇಲಿನ ಶ್ರದ್ಧೆಯಿಂದ ಪೊಲೀಸ್‌ ಕೆಲಸ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದರು.

ಕಮಲಾಪುರದ ಫಾದರ್ ಫ್ರಾನ್ಸಿಸ್ ಭಾಷ್ಯಂ ಮಾತನಾಡಿ, ದೇವರಲ್ಲಿ ನಾವು ಒಳ್ಳೆಯ ಆತ್ಮಗಳಾಗಬೇಕು ಎಂದು ಪ್ರಾರ್ಥನೆ ಮಾಡಿದರೆ ಸಾಕು ಎಲ್ಲವನ್ನು ಅವನೇ ಕರುಣಿಸುತ್ತಾನೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಕನಕಗಿರಿ ಶ್ರೀ ಸುವರ್ಣಗಿರಿ ವಿರಕ್ತ ಸಂಸ್ಥಾನ ಮಠದ ಡಾ.ಚನ್ನಮಲ್ಲ ಸ್ವಾಮೀಜಿ ಮಾತನಾಡಿದರು.

ಜಗತ್ತಿನ ಎಲ್ಲ ಶಿಖರ ಏರಿದ ಸಾಧಕಿ ನಂದಿತಾ ನಾಗನಗೌಡ, ಸರ್ಕಾರಿ ಜಾಗದಲ್ಲಿ ಅರಣ್ಯ ಬೆಳೆಸಿದ ಕೂಡ್ಲಗಿಯ ಗೂಳಪ್ಪ ಬಟ್ರಳ್ಳಿ, ಕೆಎಎಸ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಜಿಲ್ಲೆಯ ಸಾಧಕರನ್ನು
ಸನ್ಮಾನಿಸಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು