ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಯೋಜನೆಗಳ ಲಾಭ ಪಡೆಯಿರಿ: ಪಿಎಸ್‌ಐ ಡಾಕೇಶ್

ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಪಿಎಸ್‌ಐ ಡಾಕೇಶ್ ಸಲಹೆ
Last Updated 1 ಮೇ 2022, 11:16 IST
ಅಕ್ಷರ ಗಾತ್ರ

ಕುಕನೂರು: ‘ಕಾರ್ಮಿಕರು ಸರ್ಕಾರಿ ಯೋಜನೆಗಳ ಲಾಭ ಪಡೆಯಬೇಕು’ ಎಂದು ಪಿಎಸ್‌ಐ ಡಾಕೇಶ್ ಹೇಳಿದರು.

ಇಲ್ಲಿನ ಕಟ್ಟಡ ಕಾರ್ಮಿಕರ ಭವನದಲ್ಲಿ ಭಾನುವಾರ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

ಕಾರ್ಮಿಕರಿಗೆ ಹಲವು ಯೋಜನೆಗಳಿವೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಕಾರ್ಮಿಕ ಸಂಘಟನೆಗಳು ಈ ಕುರಿತು ಮುತುವರ್ಜಿ ವಹಿಸಬೇಕು ಎಂದರು.

ದುಶ್ಚಟದಿಂದ ದೂರ ಇರಬೇಕು. ಯೋಗ, ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಸುಧಾರಣೆ ಕಡೆ ಗಮನಹರಿಸಬೇಕು ಎಂದೂ ಸಲಹೆ ನೀಡಿದರು.

ಗುತ್ತಿಗೆದಾರ ವೀರಪ್ಪ ಬಿಸನಳ್ಳಿ ಮಾತನಾಡಿ,‘ಹಗಲು ರಾತ್ರಿ ಎಂದು ನೋಡುವುದಿಲ್ಲ. ಬಿಸಿಲು, ಮಳೆ ಗಾಳಿಗೂ ಜಗ್ಗುವುದಿಲ್ಲ. ಕಠಿಣ ಪರಿಶ್ರಮ, ಸಮರ್ಪಣಾ ಭಾವಕ್ಕೆ ಇವರು ಸಾಕ್ಷಿ. ಕಷ್ಟವನ್ನು ನುಂಗಿ ಖುಷಿ ಹಂಚುವವರು ಕಾರ್ಮಿಕರು. ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಬಹಳ ಹಿರಿದು. ಕಾರ್ಮಿಕರ ಶ್ರಮದಲ್ಲಿ ದೇಶದ ಅಭಿವೃದ್ಧಿ ಅಡಗಿದೆ’ ಎಂದು ಹೇಳಿದರು.

ಮುಖಂಡ ದ್ಯಾಮಣ್ಣ ಜಮಖಂಡಿ ಹಾಗೂ ರಾಮಣ್ಣ ಭಜಂತ್ರಿ ಮಾತನಾಡಿದರು.

ಮಹೇಶ್, ಹುಸೇನ್ ಸಾಬ್, ಆನಂದ್ ಗೌಡ, ನಗರಿ ಹಾರ್ಡ್ ವೇರ್, ಮನೋಜ ಕಲಾ, ಗವಿಸಿದ್ಧಪ್ಪ ಮಂಗಳೂರು, ರೈಮಾನಸಾಬ್ ಮಂಗಳೂರು, ಲಕ್ಷ್ಮಣ ಮಂಡಲಗಿರಿ, ವೀರಯ್ಯ ಹಿರೇಮಠ, ಯಲ್ಲಪ್ಪ ಕಲ್ಮನಿ, ಯಲ್ಲಪ್ಪ ಚಲವಾದಿ, ಪಕೀರಪ್ಪ ಸಾಲ್ಮನಿ, ಜುಂಜಪ್ಪ ಸಾಲ್ಮನಿ, ಗುದ್ನೇಶ ಬಂಕದಮನಿ, ಲಕ್ಷ್ಮಣ ಸಾಲ್ಮನಿ, ರಮೇಶ್ ಮಾಳೆಕೊಪ್ಪ, ಶರಣಪ್ಪ ಘಾಟಿ, ಯಲ್ಲಪ್ಪ ಕಲ್ಮನಿ, ಹೆಗ್ಗಪ್ಪ ಸಾಲ್ಮನಿ ಹಾಗೂ ರಘು ಕಲ್ಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT