ಕೊಪ್ಪಳ: ವಿಜಯಪುರದಲ್ಲಿ ವಕೀಲ ರವಿ ಮೇಲಿನಮನಿ ಅವರನ್ನು ಹತ್ಯೆ ಮಾಡಲಾಗಿದ್ದು, ಅವರ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ವಕೀಲರ ಸಂಘದವರು ಶುಕ್ರವಾರ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಘಟನೆಯನ್ನು ಖಂಡಿಸಿದರು.
ಗುರುವಾರ ರವಿ ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ನಡೆದ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ದೇಹವನ್ನು ಕಾರು ಚಾಲಕ ಎರಡು ಕಿ.ಮೀ. ತನಕ ಎಳೆದುಕೊಂಡು ಹೋಗಿದ್ದ. ಇದು ಹತ್ಯೆ ಇರಬಹುದು ಎಂದು ವಕೀಲರು ಶಂಕಿಸಿದ್ದಾರೆ.
ವಕೀಲರ ಸಂಘದ ಅಧ್ಯಕ್ಷ ಎ.ವಿ ಕಣವಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ಘಟನೆಯನ್ನು ಖಂಡಿಸಲಾಯಿತು. ಆದಷ್ಟು ಬೇಗನೆ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಲಾಯಿತು.
ವಕೀಲರಾದ ಪೀರಾಹುಸೇನ ಹೊಸಳ್ಳಿ, ಬಸವರಾಜ್ ಎಸ್. ಗಡಾದ, ಶಿವಾನಂದ ಹೊಸಮನಿ, ಮಾಳೆಕೊಪ್ಪ, ಉದಯಸಿಂಗ್, ಆಸೀಫ್ ಅಲಿ, ಸಂಘದ ಉಪಾಧ್ಯಕ್ಷ ಬಿ.ವಿ ಸಜ್ಜನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಕಾರ್ಯದರ್ಶಿ ಸಂತೋಷ ಕವಲೂರ, ರಾಜಾಸಾಬ ಬೆಳಗುರ್ಕಿ ಪಾಲ್ಗೊಂಡಿದ್ದರು.