ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ಅವರಿಗಾಗಿ ಸಕ್ರಿಯನಾಗುವೆ: ಇಕ್ಬಾಲ್ ಅನ್ಸಾರಿ

ಗಂಗಾವತಿ: ಕಾಂಗ್ರೆಸ್ ಪೂರ್ವಭಾವಿ ಸಭೆಯಲ್ಲಿ ಇಕ್ಬಾಲ್ ಅನ್ಸಾರಿ ಹೇಳಿಕೆ
Published 3 ಏಪ್ರಿಲ್ 2024, 16:09 IST
Last Updated 3 ಏಪ್ರಿಲ್ 2024, 16:09 IST
ಅಕ್ಷರ ಗಾತ್ರ

ಗಂಗಾವತಿ: ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಲು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ಶತಾಯ ಗತಾಯ ಗೆಲ್ಲಿಸಲೇಬೇಕು. ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಚುನಾವಣಾ ಚಟುವಟಿಕೆಯಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಎಂದು ಹೇಳಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ಲೋಕಸಭೆ ಚುನಾವಣೆ ನಿಮಿತ್ತ ನಡೆದ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಚುನಾವಣೆಯಲ್ಲಿ ಸೋತ ಬಳಿಕ ಮಾನಸಿಕವಾಗಿ ಕುಗ್ಗಿದ್ದ ನಾನು ಲೋಕಸಭೆ ಚುನಾವಣೆಯಲ್ಲಿ ತಟಸ್ಥವಾಗಿರಲು ಬಯಸಿದ್ದೆ. ಸಿ.ಎಂ. ಸಿದ್ದರಾಮಯ್ಯ ನನ್ನ ಕರೆಸಿಕೊಂಡು ನನಗಾದ ಸಮಸ್ಯೆ, ಅನ್ಯಾಯ ಅರಿತು ಮುಂದೆ ಎಲ್ಲವನ್ನು ಸರಿಪಡಿಸುವ ಭರವಸೆ ನೀಡಿ, ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ತಿಳಿಸಿದ್ದಾರೆ. ಅವರ ಮಾತಿಗೆ ಬೆಲೆಕೊಟ್ಟು ಚುನಾವಣೆ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಮುಂದಾಗಿದ್ದೇನೆ ಎಂದರು.

ನಂತರ ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಲಲಿತಾರಾಣಿ ರಂಗದೇವರಾಯಲು, ನಗರಸಭೆ ಸದಸ್ಯರು, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ಎಚ್.ಆರ್.ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪ ಗೈರು:

ಅನ್ಸಾರಿ ವಿರೋಧಿ ಬಣ ಎಂದು ಗುರುತಿಸಿಕೊಂಡ ವಿಧಾನಪರಿಷತ್‌ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮೀದ್ ಮನಿಯಾರ್, ಹನುಮಂತಪ್ಪ ಅರಿಸಿನಕೇರಿ  ಸಭೆಗೆ ಗೈರಾಗಿದ್ದರು.

ಜನಾರ್ದನ ರೆಡ್ಡಿ ಶ್ರೀನಾಥ್‌ ವಿರುದ್ಧ ವಾಗ್ದಾಳಿ

ಶಾಸಕ ಜನಾರ್ದನರೆಡ್ಡಿ ಮಹಾ ಸುಳ್ಳುಗಾರ. ತಮ್ಮ ವಿರುದ್ಧ ಪ್ರಕರಣ ರದ್ದುಪಡಿಸಿ ಬಳ್ಳಾರಿಗೆ ಹೋಗಲು ಅವಕಾಶ ನೀಡಿದರೆ ಬಿಜೆಪಿ. ಅಂಜನಾದ್ರಿಗೆ ಅನುದಾನ ನೀಡಿದರೆ ಕಾಂಗ್ರೆಸ್. ರಾಜಕೀಯ ಎನ್ನುವುದು ಏನಾದ್ರೂ ಮಾರ್ಕೆಟಿಂಗಾ? ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಜಿಗಿಯಲು. ಬದಲಾಗಿ ನಾನು ಐಪಿಎಲ್ ಆಟಗಾರ ಅಂತ ಆರೋಪಿಸುತ್ತಾರೆ.  ಗಂಗಾವತಿಯಲ್ಲಿ ಆತನಿಗೆ ನಿರ್ದಿಷ್ಟ ಮತಗಳೇ ಇಲ್ಲ. ಜೀರೊ ಇದ್ದಾನೆ ಎಂದು ಇಕ್ಬಾಲ್‌ ಅನ್ಸಾರಿ ವಾಗ್ದಾಳಿ ನಡೆಸಿದರು.  ಮೂಲ ಕಾಂಗ್ರೆಸ್ಸಿಗರು ನನ್ನ ಸಾಂಪ್ರದಾಯಿಕ ಶತ್ರುಗಳು. ಬ್ಲಾಕ್ ಯುವ ಘಟಕ ಹಿಂದುಳಿದ ವರ್ಗದ ಘಟಕದ ಅಧ್ಯಕ್ಷರು ಜನಾರ್ದನರೆಡ್ಡಿ ಬಳಿ ಹಣಕ್ಕೆ ಡೀಲ್ ಮಾಡಿಕೊಂಡು ನನ್ನನ್ನು ಸೋಲಿಸಿದರು. ಅನ್ಸಾರಿ ಪ್ರಚಾರ ಮಾಡಿಲ್ಲ. ಹಳ್ಳಿಗಳಿಗೆ ಭೇಟಿ ನೀಡಿಲ್ಲ ಎಂದು ಸಿಎಂಗೆ ದೂರು ನೀಡಿದ್ದರು. ಅವರು ಮೂಲ ಕಾಂಗ್ರೆಸ್ಸಿಗರಲ್ಲ. ಕಾಂಗ್ರೆಸ್ಸಿಗೆ ಮೂಲ ಆಗಿದ್ದಾರೆ. ಇವರಿಗೆ ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಂ ಸಮಾಜವನ್ನು ಒಡೆಯುವುದೇ ಕೆಲಸ ಮಾಡಿಕೊಂಡಿದ್ದಾರೆ. ಅವರ ಮನೆಯಲ್ಲೇ ಆರ್‌ಎಸ್‌ಎಸ್ ಸಭೆಗಳು ನಡೆಯುತ್ತವೆ ಎಂದು ಪರೋಕ್ಷವಾಗಿ ಎಚ್.ಆರ್‌.ಶ್ರೀನಾಥ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT