ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ |ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ಶೇ 83.70 ಮತದಾನ

Published 3 ಜೂನ್ 2024, 15:44 IST
Last Updated 3 ಜೂನ್ 2024, 15:44 IST
ಅಕ್ಷರ ಗಾತ್ರ

ಯಲಬುರ್ಗಾ: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧ ಸೋಮವಾರ ನಡೆದ ಮತದಾನ ಪ್ರಕ್ರಿಯೆಯು ಶಾಂತಯುತ ಹಾಗೂ ವ್ಯವಸ್ಥಿತವಾಗಿ ನಡೆಯಿತು. ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಪಟ್ಟಣದ ಎರಡು ಮತಗಟ್ಟೆಗಳಲ್ಲಿ ನಡೆದ ಈ ಮತದಾನ ಪ್ರಕ್ರಿಯೆಯಲ್ಲಿ ಶೇ 83.70ರಷ್ಟು ದಾಖಲಾಗಿದೆ. ಒಟ್ಟು 1,332 ಮತದಾರರ ಪೈಕಿ 810 ಪುರುಷರು, 405 ಮಹಿಳೆಯರು ಸೇರಿ 1,115 ಮತದಾರರು ಹಕ್ಕು ಚಲಾಯಿಸಿದ್ದಾರೆ.

ಯಲಬುರ್ಗಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಒಟ್ಟು 1,011 ಮತದಾರರ ಪೈಕಿ 619 ಪುರುಷರು, 240 ಮಹಿಳೆಯರು ಸೇರಿ ಒಟ್ಟು 859 ಮತದಾರರು ಹಕ್ಕು ಚಲಾಯಿಸಿದ್ದರಿಂದ ಶೇ 84.96ರಷ್ಟು ದಾಖಲಾಗಿದೆ. ಹಿರೇವಂಕಲಕುಂಟಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 321 ಮತದಾರರ ಪೈಕಿ 256 ಮತದಾರರು ಮತದಾನ ಮಾಡಿದ್ದಾರೆ. ಇಲ್ಲಿ ಶೇ 79.75ರಷ್ಟು ಮತದಾನ ದಾಖಲಾಗಿದೆ.

ಎರಡು ಮತಗಟ್ಟೆಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 12.30ರವರೆಗೆ ತೀರಾ ಮಂದಗತಿಯಲ್ಲಿ ಸಾಗಿದ್ದ ಮತದಾನ ಪ್ರಕ್ರಿಯೆಯು ಮಧ್ಯಾಹ್ನದ ನಂತರ ಚುರುಕು ಕಾಣಿಸಿಕೊಂಡಿತು. ಯಲಬುರ್ಗಾ ಮತಗಟ್ಟೆಯಲ್ಲಿ ನಿಗದಿತ ಸಮಯ ಮುಕ್ತಾಯದೊಳಗೆ ಹಾಜರಾಗಿದ್ದ ಮತದಾರರು ಸಮಯ ಮುಕ್ತಾಯಗೊಂಡಿದ್ದರೂ ಸಾಲುಗಟ್ಟಿದ್ದು ಕಂಡು ಬಂತು. ಆದರೆ ಹಿರೇವಂಕಲಕುಂಟಾ ಮತಗಟ್ಟೆಯಲ್ಲಿ ಸಂಜೆ 4 ಗಂಟೆ ಹೊತ್ತಿಗೆ ಮತದಾನ ಮುಕ್ತಾಯಗೊಂಡಿತು.

ನಿಗದಿತ ಸಮಯದಲ್ಲಿಯೇ ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ ಎಂದು ತಹಶೀಲ್ದಾರ್‌ ಬಸವರಾಜ ತೆನ್ನಳ್ಳಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT