ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಗಿರಿ | ಬ್ರೈಲ್‌ ಲಿಪಿ ಮೂಲಕ ಅಣಕು ಮತದಾನ

Published : 31 ಜನವರಿ 2024, 14:17 IST
Last Updated : 31 ಜನವರಿ 2024, 14:17 IST
ಫಾಲೋ ಮಾಡಿ
Comments

ಕನಕಗಿರಿ: ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಮತದಾನ ಜಾಗೃತಿ ಹಾಗೂ ಇವಿಎಂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಬುಧವಾರ ನಡೆಯಿತು.
ತಾಲ್ಲೂಕು ಐಇಸಿ ಸಂಯೋಜಕ ಶಿವಕುಮಾರ ಮಾತನಾಡಿ, ‘18 ವರ್ಷಕ್ಕಿಂತ ಮೇಲಿನವರು ಮತದಾರರ ಪಟ್ಟಿಯಲ್ಲಿ ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಹೇಳಿದರು.

ಮತದಾನದ ಹಕ್ಕನ್ನು ಎಲ್ಲರೂ ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೇ ಮತ ಚಲಾಯಿಸಬೇಕು ಎಂದರು. ನಂತರ ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಕುರಿತು ಮಾಹಿತಿ ನೀಡಿದರು.

ಇದೇ ವೇಳೆ ಅಂಧ ಮತದಾರರೊಬ್ಬರು ಬ್ಯಾಲೆಟ್‌ ಯೂನಿಟ್‌ನಲ್ಲಿ ಬ್ರೈಲ್‌ ಲಿಪಿಯನ್ನು ಸ್ಪರ್ಶಿಸುವ ಮೂಲಕ ಮತವನ್ನು ಚಲಾಯಿಸಿದ್ದು, ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ರವಿ ನಾಯಕ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಗದೀಶಪ್ಪ ಗದ್ದಿ, ಸದಸ್ಯರಾದ ರಾಜಸಾಬ ಕಟ್ಟಿಮನಿ, ಗ್ರಾಮದ ಮುಖಂಡರಾದ ಯಮನೂರಪ್ಪ ಕೆಲೂರ್‌, ಭೀಮಣ್ಣ ಹೂಗಾರ ಮತ್ತಿತರರು ಹಾಜರಿದ್ದರು.

ಎಂಬಿಕೆ, ಕೃಷಿ, ಪಶು ಸಖಿಯರಿಗೆ ಮತದಾನ ಜಾಗೃತಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಎನ್ಆರ್‌ಎಲ್‌ಎಂ ವಿಭಾಗದಿಂದ ನಡೆದ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಎರಡು ದಿನದ ತರಬೇತಿ ಕಾರ್ಯಾಗಾರದಲ್ಲಿ ತಾಲ್ಲೂಕು ಸ್ವೀಪ್‌ ಸಮಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.

ತಾ.ಪಂ ವಿಷಯ ನಿರ್ವಾಹಕ ಕೋಟ್ರಯ್ಯಸ್ವಾಮಿ,ಎನ್ಆರ್‌ಎಲ್‌ಎಂ ಸಂಯೋಜಕಿ ರೇಣುಕಾ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT