ಮಳೆ ಬಂದರೆ ಸಾಕು ಮಳೆ ಮತ್ತು ಚರಂಡಿ ನೀರು ಮನೆಗೆ ನುಗ್ಗುತ್ತವೆ. ಮಲಗಲು ಜಾಗವೇ ಇರುವುದಿಲ್ಲ. ಮನೆ ಮುಂಭಾಗದ ಚರಂಡಿ ಎತ್ತರದಲ್ಲಿದ್ದು ಮನೆಬಳಿ ಸಂಗ್ರಹವಾದ ನೀರು ಚರಂಡಿಗೆ ಹೋಗುವುದಿಲ್ಲ.ಮುದಿಯಪ್ಪ (ಜೈಭೀಮ್ ನಗರ) ಲಕ್ಷ್ಮಿಕ್ಯಾಂಪ್ ನಿವಾಸಿ
ನಮ್ಮ ಬಡಾವಣೆಯಲ್ಲಿನ ಚರಂಡಿಯಲ್ಲಿನ ಕಸ ತುಂಬಿರುವ ಕಾರಣ ನೀರು ಸರಾಗವಾಗಿ ಹೋಗದೆ ದುರ್ನಾತ ಬೀರುತ್ತಿದೆ. ಮಳೆಯಾದದೆ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ನಗರಸಭೆ ಅಧಿಕಾರಿಗಳು ಈ ಬಗ್ಗೆ ಕಾಳಜಿವಹಿಸಬೇಕುಗಾದಿಲಿಂಗಪ್ಪ ಕುಮಾರರಾಮ ಬಡಾವಣೆ ನಿವಾಸಿ
ಹಮಾಲರ ಕಾಲೊನಿಯಲ್ಲಿ ಅಸ್ವಚ್ಚತೆ ತಾಂಡವಾಡುತ್ತಿದೆ. ಸಮರ್ಪಕ ತ್ಯಾಜ್ಯ ನಿರ್ವಹಣೆಯೇ ಇಲ್ಲ. ಮಳೆಯಾದರೆ ಸಾಕು ಕಾಲೊನಿಗೆ ತೆರಳುವ ಮುಖ್ಯ ರಸ್ತೆಯಲ್ಲೇ ನೀರು ನಿಲ್ಲುತ್ತವೆ. ಮಹಿಳೆಯರು ವೃದ್ಧರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡಬೇಕಾಗಿದೆಶರಣಪ್ಪ ಕಲ್ಗುಡಿ ಹಮಾಲರ ಕಾಲೊನಿ ನಿವಾಸಿ
ಗುಂಡಮ್ಮ ಕ್ಯಾಂಪ್‌ನಲ್ಲಿ ಎತ್ತ ನೋಡಿದರೂ ದುರ್ವಾಸನೆ ಬೀರುವ ತ್ಯಾಜ್ಯವೇ ಕಾಣುತ್ತದೆ. ಚರಂಡಿ ಸ್ವಚ್ಚತೆಯಿಲ್ಲ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣವಿಲ್ಲ. ದುರ್ವಾಸನೆ ಬೀರುವ ತ್ಯಾಜ್ಯದಿಂದ ರೋಗಗಳು ಬರುತ್ತವೆ. ಸ್ಥಳೀಯ ಆಡಳಿತ ಸ್ವಚ್ಛತೆಗೆ ಆದ್ಯತೆ ಕೊಡಬೇಕುಪ್ರಶಾಂತ ಗುಂಡಮ್ಮ ಕ್ಯಾಂಪ್ ನಿವಾಸಿ
ನಮ್ಮ ಕಾಲೊನಿಯಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗದ ಕಾರಣ ನಿವಾಸಿಗಳು ಖಾಲಿ ನಿವೇಶಗಳಲ್ಲಿ ಕಸ ಎಸೆಯುತ್ತಿದ್ದಾರೆ. ಅವು ರೋಗ ಹರಡುವ ತಾಣಗಳಾಗುತ್ತಿವೆ.ರವಿಕುಮಾರ ಎಚ್.ಆರ್.ಎಸ್ ಕಾಲೋನಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.