ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಾಹಾರ ಉದ್ರಿ ರೂಪದಲ್ಲಿ ಕೊಡದಿದ್ದಕ್ಕೆ ಕೊಲೆ

ತೆಗ್ಗಿಹಾಳದಲ್ಲಿ ಘಟನೆ: ಆರೋಪಿಗಳ ಬಂಧನ
Last Updated 1 ಮಾರ್ಚ್ 2023, 4:47 IST
ಅಕ್ಷರ ಗಾತ್ರ

ಕುಷ್ಟಗಿ: ಉಪಾಹಾರವನ್ನು ಉದ್ರಿ ರೂಪದಲ್ಲಿ ನಿತ್ಯವೂ ಕೊಡದ ಕಾರಣಕ್ಕೆ ಸಿಟ್ಟಿಗೆದ್ದು ವ್ಯಕ್ತಿಯೊಬ್ಬ ಸೋಮವಾರ ಸಂಜೆ ತಾಲ್ಲೂಕಿನ ತೆಗ್ಗಿಹಾಳ ಗ್ರಾಮದಲ್ಲಿ ಶೇಖರಗೌಡ ಪೊಲೀಸ್‌ಪಾಟೀಲ (50) ಎಂಬ ಹೋಟೆಲ್‌ ಮಾಲೀಕನನ್ನು ಕೊಲೆ ಮಾಡಿದ ಘಟನೆ ನಡೆದಿದೆ.

ಕೊಲೆ ಆರೋಪಿ ವೆಂಕಟೇಶ ಚಿಗರಿ ಮತ್ತು ಕೃತ್ಯಕ್ಕೆ ಪ್ರಚೋದಿಸಿದ ಲಕ್ಷ್ಮವ್ವ ಚಿಗರಿ ಎಂಬುವರನ್ನು ಬಂಧಿಸಲಾಗಿದೆ. ನಿತ್ಯವೂ ಉಪಾಹಾರವನ್ನು ಉದ್ರಿ ರೂಪದಲ್ಲಿ ಕೊಡಲು ವೆಂಕಟೇಶ, ಶೇಖರಗೌಡಗೆ ಬೆದರಿಕೆ ಹಾಕುತ್ತಿದ್ದ. ಸೋಮವಾರ ಸಂಜೆ ಮತ್ತೆ ಜಗಳವಾಗಿ, ವೆಂಕಟೇಶ ಹಲ್ಲೆ ಮಾಡಿದ. ತೀವ್ರವಾಗಿ ಗಾಯಗೊಂಡ ಶೇಖರಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟರು’ ಎಂದು ತಾವರಗೇರಾ ಠಾಣೆ ಪೊಲೀಸರು ತಿಳಿಸಿದ್ದಾರೆ.

ಗಂಗಾವತಿ ಉಪ ವಿಭಾಗದ ಡಿವೈಎಸ್‌ಪಿ ಎಚ್‌.ಶೇಖರಪ್ಪ ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್ ಎನ್‌.ಅರ್‌.ನಿಂಗಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT