ಭಾನುವಾರ, ಸೆಪ್ಟೆಂಬರ್ 25, 2022
28 °C

ಶ್ರಮದಿಂದ ಮಾತ್ರ ಸಂಗೀತ ಸಾಧನೆ: ಜಿ. ಕೆ. ವಿಶ್ವನಾಥ ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಸಂಗೀತ ವಿದ್ಯೆ ಸುಲಭವಾಗಿ ದೊರಕುವಂತಹುದಲ್ಲ. ಅದಕ್ಕೆ ಸಾಕಷ್ಟು ಶ್ರಮ ಮತ್ತು ಸಾಧನೆ ಅವಶ್ಯಕತೆ ಇದೆ‘ ಎಂದು ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಪ್ರಾಚಾರ್ಯ ಜಿ. ಕೆ. ವಿಶ್ವನಾಥ ಗೌಡ ಅಭಿಪ್ರಾಯಪಟ್ಟರು.

ನಗರದ ವಿಠ್ಠಲಕೃಷ್ಣ ದೇವಸ್ಥಾನದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ, ಬನ್ನಿಕೊಪ್ಪದ ಕಲಾರಂಗ ಸಂಸ್ಥೆ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಕಲಾವಿದರಿಗೆ ಪ್ರೋತ್ಸಾಹದ ಅಗತ್ಯವಿದ್ದು ಕಲೆ ಹಾಗೂ ಸಂಗೀತ ಉಳಿಯಬೇಕಾದರೆ ಮಕ್ಕಳನ್ನು ಪ್ರೇರೇಪಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ವೆಂಕಟೇಶ ಪ್ರಸಾದ, ಜಗದಯ್ಯ ಸಾಲಿಮಠ, ಹಾಗೂ ಶ್ರೀದೇವಿ ಕಾಶಿ ಅವರನ್ನು ಸನ್ಮಾನಿಸಲಾಯಿತು.

ಶಾಂತಾ ಕುಲಕರ್ಣಿ ದಾಸರ ಪದ ಮತ್ತು ಭಾವಗೀತೆಗಳನ್ನು ಹಾಡಿದ್ದರು. ಪ್ರಜ್ಞಾ ಕೀಲಿ ಹಾರ್ಮೋನಿಯಂ ಸಾತ್‌ ನೀಡಿದರು. ಫಕೀರಪ್ಪ ಕುಂಟಗೆರಿ ಹಂಸವಾಹಿನಿ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ಜ್ಯೋತಿ ಸಿದ್ಧಾಂತಿ, ಸಂತೋಷ ಕುಲಕರ್ಣಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು