ಹನುಮಸಾಗರ: ‘ಸಂಗೀತ, ಮಾನಸಿಕ ನೆಮ್ಮದಿ ನೀಡಿ ಆರೋಗ್ಯ ವೃದ್ಧಿಸುವ ಕೆಲಸ ಮಾಡುತ್ತದೆ. ಆದ್ದರಿಂದ ಎಲ್ಲರೂ ಸಂಗೀತದ ಒಲುಮೆಗೆ ಪಾತ್ರರಾಗಬೇಕು’ ಎಂದು ಮುಖಂಡ ಬಸವರಾಜ ಹಳ್ಳೂರ ಹೇಳಿದರು.

ಇಲ್ಲಿನ ನಿಸರ್ಗ ಸಂಗೀತ ಶಾಲೆಯಲ್ಲಿ ಶನಿವಾರ ನಡೆದ ಭಾವಸಂಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯ ಜಂಪ್‍ರೂಪ್ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ರಜಾಕ್ ಟೇಲರ್ ಮಾತನಾಡಿ,‘ಗ್ರಾಮದಲ್ಲಿ ಸಂಗೀತ ಶಾಲೆ ಇರುವುದರಿಂದ ಸಾಕಷ್ಟು ಕಲಾವಿದರಿಗೆ ಅನುಕೂಲವಾಗಿದೆ. ಯಾವುದೇ ವೃತ್ತಿಯಲ್ಲಿರಲಿ, ವಿದ್ಯಾರ್ಥಿಯಾಗಿರಲಿ ಸಂಗೀತವನ್ನು ನಮ್ಮ ಬದುಕಿನ ಒಂದು ಭಾಗವಾಗಿ ಸ್ವೀಕರಿಸಬೇಕು’ ಎಂದು ಹೇಳಿದರು.

ಸಂಗೀತ ಶಾಲೆಯ ಮುಖ್ಯಸ್ಥ ಮಲ್ಲಯ್ಯ ಕೋಮಾರಿ ಮಾತನಾಡಿ,‘ನಮ್ಮ ಸಂಗೀತ ಶಾಲೆಯಿಂದ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೆವು. ಆದರೆ ಕೋವಿಡ್ ಕಾರಣದಿಂದ ಸಂಗೀತ ಕಲಾವಿದರಿಗೆ ಕಾರ್ಯಕ್ರಮಗಳಿಲ್ಲ. ವೇದಿಕೆಯೂ ಇಲ್ಲದಂತಾಗಿದೆ. ಸದ್ಯ ಕಲಾವಿದರು ತೊಂದರೆಯಲ್ಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರಿಗೆ ನೆರವಾಗಬೇಕು, ಇಲಾಖೆಯಿಂದ ಕಾರ್ಯಕ್ರಮಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಸಂಗೀತ ಕಲಾವಿದೆ ಶ್ರೀದೇವಿ ಕೋಮಾರಿ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ವಿರೂಪಾಕ್ಷಪ್ಪ ಧುತ್ತರಗಿ, ಶಂಕರ ಬಸುದೆ ಹಾಗೂ ಕಿರಣ ಬಸುದೆ ಸಂಗೀತ ಸಾಥ್ ನೀಡಿದರು.

ಈರಣ್ಣ ಹುನಗುಂಡಿ, ಉಮೇಶ ರಜಪೂತ, ಶಿವಪ್ಪ ನೀರಲಕೇರಿ, ಯಮನೂರಪ್ಪ ನೀರಲಕೇರಿ, ಚಂದಯ್ಯ ಕೋಮಾರಿ, ಕರಿಸಿದ್ದಯ್ಯ ಕೋಮಾರಿ, ಯಮನೂರಪ್ಪ ಹಕ್ಕಿ, ರೇಣುಕಾ ಪುರದ, ವಿಜಯಲಕ್ಷ್ಮೀ ಸಜ್ಜನ, ಚಂದ್ರಕಲಾ ಪಟ್ಟಣಶೆಟ್ಟಿ, ಶಾಂತಾ ತೋಟದ, ಸುಜಾತಾ ಧುತ್ತರಗಿ, ಲಕ್ಷ್ಮೀ ಕೋಮಾರಿ ಹಾಗೂ ಮಹಾಂತಯ್ಯ ಕೋಮಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.