ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹತಾಶೆ ಇಲ್ಲ, ಕಾರ್ಯಕರ್ತರ ಸೇವೆಗೆ ಸಿದ್ಧ: ಬಸವರಾಜ

Published 5 ಜೂನ್ 2024, 6:55 IST
Last Updated 5 ಜೂನ್ 2024, 6:55 IST
ಅಕ್ಷರ ಗಾತ್ರ

ಕುಷ್ಟಗಿ: ‘ಕರಡಿ ಸಂಗಣ್ಣ ಅವರು ಕಾಂಗ್ರೆಸ್‌ ಸೇರಿದರೂ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡಮಟ್ಟದ ಪರಿಣಾಮ ಏನೂ ಆಗಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕೊಪ್ಪಳ ಕ್ಷೇತ್ರದಲ್ಲಿ ನಮ್ಮ ಮುಖಂಡರು ಇಲ್ಲದಿದ್ದರೂ ಕಾಂಗ್ರೆಸ್‌ಗೆ ಕೇವಲ ಆರು ಸಾವಿರ ಮತಗಳನ್ನಷ್ಟೇ ಹೆಚ್ಚಿಗೆ ನೀಡಿ ಬಿಜೆಪಿ ಪರ ಒಲವು ತೋರಿರುವ ಇಲ್ಲಿನ ಮತದಾರರನ್ನು ಅಭಿನಂದಿಸುತ್ತೇನೆ’ ಎಂದು ಲೋಕಸಭೆ ಚುನಾವಣೆಯ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಹೇಳಿದರು.

ಫಲಿತಾಂಶ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಅವರು ‘ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಅಂತರ ನೀಡುತ್ತ ಬಂದಿದ್ದ ವಿಧಾನಸಭಾ ಕ್ಷೇತ್ರಗಳೇ ಈ ಬಾರಿ ಕೈಕೊಟ್ಟಿವೆ. ಹೊಸಬನಾದರೂ ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನ ಪರವಾಗಿ ಶ್ರಮಿಸಿದ್ದರಿಂದ ಗೆಲುವಿನ ಸಂಗಣ್ಣ ಅವರಂಥ ಮುಖಂಡರು ಪಕ್ಷ ಬಿಟ್ಟುಹೋದರೂ ಅವರನ್ನು ಯಾರೂ ಹಿಂಬಾಲಿಸಲಿಲ್ಲ. ಆದರೂ ಫಲಿತಾಂಶ ಹೀಗಾಗುತ್ತೆ ಎಂದುಕೊಂಡಿರಲಿಲ್ಲ. ನಮ್ಮ ಸ್ವಂತ (ಕುಷ್ಟಗಿ) ಕ್ಷೇತ್ರದಲ್ಲಿಯೇ ಮತಗಳಿಕೆ ಕಡಿಮೆಯಾಗಿರುವುದು ಯಾಕೆಂದು ಅರ್ಥವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುವುದಿಲ್ಲ.

ಸೋಲು ಎಲ್ಲ ತಪ್ಪು ಹುಡುಕುತ್ತದೆ; ‘ಮತದಾರರ ತೀರ್ಪನ್ನು ಗೌರವಿಸುತ್ತೇವೆ. ಗೆಲ್ಲುವ ನಿರೀಕ್ಷೆ ಇತ್ತು. ಕಾಂಗ್ರೆಸ್‌ ಕ್ಷೇತ್ರದ ಶಾಸಕರು ಇರುವಲ್ಲಿ ಹೆಚ್ಚಿನ ಮತಗಳು ಬಂದಿವೆ. ಹಿಂದೆ 2013ರಲ್ಲಿ ತಾವು ಶಾಸಕರಿದ್ದಾಗಲೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ 2000 ಹೆಚ್ಚಿನ ಮತ ಹೋಗಿದ್ದವು. 2019ರಲ್ಲಿ ತಾವು ಶಾಸಕ ಇಲ್ಲದಿದ್ದಾಗ ಬಿಜೆಪಿಗೆ 7000ಕ್ಕೂ ಹೆಚ್ಚು ಮತ ಬಂದವು. ಬೇರೆ ಬೇರೆ ಕಾರಣಗಳಿಗೆ ಸೋಲು ಆಗಿದ್ದು ಅದರ ಬಗ್ಗೆ ಆತ್ಮಾವಲೋಕನ ನಡೆಸಬೇಕಿದೆ’ ಎಂದು ಅವರು ಹೇಳಿದರು.

ನವೀನ ಗುಳಗಣ್ಣನವರ್
ನವೀನ ಗುಳಗಣ್ಣನವರ್

ಸೋಲಿನಿಂದ ಹತಾಶೆಗೊಳ್ಳುವುದಿಲ್ಲ. ಜನಾದೇಶವನ್ನು ಗೌರವಿಸುವೆ. ಪಕ್ಷದಲ್ಲಿ ಈಗ ಸಂಪೂರ್ಣವಾಗಿ ಗುರುತಿಸಿಕೊಂಡಿದ್ದು ತಮ್ಮ ಪರ ಕೆಲಸ ಮಾಡಿರುವವರ ಸೇವೆಯಲ್ಲಿ ತೊಡಗಿಕೊಳ್ಳುವೆ. ಮುಂಬರುವ ಚುನಾವಣೆಗೆ ಹುರಿದುಂಬಿಸುವೆ.

-ಡಾ. ಬಸವರಾಜ ಕ್ಯಾವಟರ್‌ ಬಿಜೆಪಿ ಪರಾಜಿತ ಅಭ್ಯರ್ಥಿ

ಲೋಕಸಭಾ ಚುನಾವಣೆಯಲ್ಲಿ ಜನರು ನೀಡಿದ ತೀರ್ಪಿಗೆ ತಲೆಬಾಗುತ್ತೇನೆ. ಸೋಲಿನ ಅವಲೋಕನ ಮಾಡುತ್ತೇವೆ. ಸೋಲನ್ನು ಸವಾಲಾಗಿ ಸ್ವೀಕರಿಸಿ ಕಾರ್ಯಕರ್ತರ ಜೊತೆಗಿದ್ದು ಜನರ ವಿಶ್ವಾಸ ಗಳಿಸುವ ಕೆಲಸ ಮಾಡುವೆ.

-ನವೀನ ಗುಳಗಣ್ಣನವರ ಬಿಜೆಪಿ ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT