ಶನಿವಾರ, ಸೆಪ್ಟೆಂಬರ್ 25, 2021
22 °C
ಶಾಸಕ ಕೆ.ರಾಘವೇಂದ್ರ ಹಿಟ್ನಾಳಗೆ ಪೇಂಟಿಂಗ್ ಕಾರ್ಮಿಕರ ಮನವಿ

‘ಆಶ್ರಯ’ ಮನೆ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿಲ್ಲೆಯಲ್ಲಿ ಸತತ ಬರಗಾಲದಿಂದ ಕೆಲಸಗಳಿಲ್ಲದೆ ಸಂಕಷ್ಟದಲ್ಲಿದ್ದಾಗ ಕೋವಿಡ್‌ನಿಂದಾಗಿ ಪೇಂಟಿಂಗ್ ವೃತ್ತಿಯಲ್ಲಿರುವ ಕಾರ್ಮಿಕರಿಗೆ ತೀವ್ರ ತೊಂದರೆಯಾಗಿದ್ದು, ಅವರಿಗೆ ಆಶ್ರಯ ಯೋಜನೆಯಲ್ಲಿ ಮನೆ ನೀಡಬೇಕು ಎಂದು ಪೇಂಟರ್ ಕಾರ್ಮಿಕರ ಸಂಘದಿಂದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಲಾಯಿತು.

ಎರಡು ವರ್ಷಗಳಿಂದ ಕೊರೊನಾ ಮತ್ತು ಲಾಕ್‌ಡೌನ್ ಕಾರಣದಿಂದ ದುಡಿಮೆಯಿಲ್ಲ. ಆರ್ಥಿಕ ಸಂಕಷ್ಟದ ಈ ಪರಿಸ್ಥಿತಿಯಲ್ಲಿ ಸ್ವಂತ ಮನೆಗಳಿಲ್ಲದವರು ಮನೆಗಳಿಗೆ ಬಾಡಿಗೆ ಕಟ್ಟಲಾಗದೆ, ಉಪಜೀವನ ನಡೆಸಲು ಪರದಾಡುತ್ತಿದ್ದಾರೆ. ಪೇಂಟರ್ ಕಾರ್ಮಿಕರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ಒದಗಿಸಿ, ಬಾಡಿಗೆ ಮನೆಗಳ ಮಾಲೀಕರಿಂದ ಆಗುವ ಕಿರುಕುಳಗಳಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಮನೆಗಳು ಹಂಚಿಕೆ ಸಾಧ್ಯತೆ ಕಡಿಮೆ ಇದ್ದು. ಚಿಕ್ಕಸಿಂದೋಗಿ ರಸ್ತೆಯಲ್ಲಿ ಅಥವಾ ಇನ್ನಿತರ ಕಡೆ ನಿವೇಶನಗಳನ್ನು ಖಚಿತವಾಗಿ ಒದಗಿಸಲು ನಾನು ಮತ್ತು ನಗರಸಭೆ ಅಧ್ಯಕ್ಷರು ಪ್ರಯತ್ನ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಮನೆ ನಿರ್ಮಿಸಿಕೊಡುವ ಬಗ್ಗೆ ಪ್ರಯತ್ನ ಮಾಡೋಣ ಎಂದರು.

ಮುಖಂಡ ಗವಿಸಿದ್ದಪ್ಪ ಚಿನ್ನೂರು ಕಾರ್ಮಿಕರ ಬಾಡಿಗೆ ಮನೆಗಳ ಸಮಸ್ಯೆ ಕುರಿತು ಶಾಸಕರಿಗೆ ವಿವರಿಸಿದರು.

ಆದಷ್ಟು ತೀವ್ರದಲ್ಲಿ ನಮ್ಮ ಸಂಘದ ಅರ್ಹ ಪೇಂಟರ್ ಕಾರ್ಮಿಕರಿಗೆ ಆಶ್ರಯ ಯೋಜನೆಯಲ್ಲಿ ಮನೆ ನೀಡಬೇಕು ಎಂದು ಸಂಘದ ಜಿಲ್ಲಾ ಅಧ್ಯಕ್ಷ ರಜಾಕ್ ಪೇಂಟರ್‌, ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಂಡ್ಯ, ಖಜಾಂಚಿ ಆಸಿಫ್ ಕಿಲ್ಲೇದಾರ್, ಎಸ್. ನೂರುಲ್ಲಾ ಖಾದ್ರಿ , ಎಸ್.ಎ.ಗಫಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.