ಬುಧವಾರ, ಮೇ 19, 2021
22 °C

ನವಿಲು ಪಾರ್ಕ್ ನಿರ್ಮಾಣಕ್ಕೆ ಪರಿಸರ ಪ್ರಿಯರ ಮನವಿ

ಕಿಶನ್‌ರಾವ್‌ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಈ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ನವಿಲಿನ ಸಂಖ್ಯೆ ಹೆಚ್ಚುತ್ತಿದ್ದು, ನವಿಲಿಗೆ ಸೂಕ್ತ ರಕ್ಷಣೆ ಇಲ್ಲದ ಕಾರಣ ನಾಯಿಗಳ ಪಾಲಾಗುತ್ತಿದ್ದು, ಸರ್ಕಾರ ಈ ಭಾಗದಲ್ಲಿ ನವಿಲು ಧಾಮ ನಿರ್ಮಾಣ ಮಾಡಿ ಅವುಗಳ ಸಂತತಿ ಉಳಿಸಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಗದಗ ಜಿಲ್ಲೆಯ ಕಾಲಕಾಲೇಶ್ವರ ಬಿಟ್ಟದಿಂದ ಹಿಡಿದು ಬಾಗಲಕೋಟೆ ಜಿಲ್ಲೆ ಗುಡೂರ ಮಧ್ಯದಲ್ಲಿ ಬರುವ ಚಂದಾಲಿಂಗಬೆಟ್ಟ, ವೆಂಕಟಾಪುರ ಬೆಟ್ಟ, ಬಾದಿಮನಾಳ, ಅರಸಿಬಿಡಿ ಕೆರೆ ಭಾಗದಲ್ಲಿ ಸುಮಾರು 40 ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ನವಿಲುಗಳು ಇವೆ.

ರಾಷ್ಟ್ರಪಕ್ಷಿ ನವಿಲು ಬೇಟೆ, ಹತ್ಯೆ, ಆಹಾರಕ್ಕೆ ಬಳಕೆ, ಸಾಕಲು ನಿಷೇಧವಿದೆ. ಕೆಲವು ನವಿಲುಗಳು ಗ್ರಾಮದ ಜನರೊಂದಿಗೆ ಅನ್ಯೋನ್ಯವಾಗಿದ್ದರೂ ನಾಯಿ, ಬೆಕ್ಕುಗಳ ಕಾಟಕ್ಕೆ ಹೆದರಿ ಓಡಿ ಹೋಗುತ್ತವೆ. ಬೆಟ್ಟದ ಭಾಗದಲ್ಲಿ ರಕ್ಷಣೆಗೆ ಅನುಕೂಲವಿದೆ ವಿನಃ ಆಹಾರ ಹಾಗೂ ಕುಡಯುವ ನೀರಿಗೆ ತೀವ್ರ ತೊಂದರೆ ಇದೆ.

ಅರಣ್ಯ ಇಲಾಖೆ ಈ ಭಾಗದಲ್ಲಿ ನವಿಲುಗಳ ಉಳಿಯುವಿಕೆಗಾಗಿ ಧಾಮ ಮಾಡುವುದರ ಮೂಲಕ ನವಿಲು ಸಂತತಿ ಉಳಿಯುವಿಕೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ರುದ್ರಗೌಡ ಗೌಡಪ್ಪನವರ ಹಾಗೂ ರಮೇಶ ಬಡಿಗೇರ ಒತ್ತಾಯಿಸಿದ್ದಾರೆ.

ನವಿಲು ಧಾಮ ನಿರ್ಮಾಣ ಮಾಡಿ ಕುಡಿಯುವ ನೀರು, ಅವುಗಳ ಆಹಾರ, ಕಾಡು ಬೆಳೆಸುವ ಮೂಲಕ ಸುಂದರ ಪಕ್ಷಿಯ ರಕ್ಷಣೆ ಮಾಡಬೇಕು ಎಂಬುವುದು ಈ ಭಾಗದ ವನ್ಯಜೀವಿ ಪ್ರೇಮಿಗಳ ಆಗ್ರಹವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.