ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ | ಕಳಪೆ ಆಹಾರ ಸಮಸ್ಯೆ ಇತ್ಯರ್ಥಪಡಿಸಿ: ವಿದ್ಯಾರ್ಥಿನಿಯರ ಧರಣಿ

Published : 14 ಆಗಸ್ಟ್ 2024, 14:23 IST
Last Updated : 14 ಆಗಸ್ಟ್ 2024, 14:23 IST
ಫಾಲೋ ಮಾಡಿ
Comments

ಗಂಗಾವತಿ: ತಾಲ್ಲೂಕಿನ ಸಂಗಾಪುರ ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬಾಲಕರ ವಸತಿ ನಿಲಯದಲ್ಲಿ ಕಳಪೆ ಆಹಾರ ಪೂರೈಕೆ ಮಾಡುವುದನ್ನು ಖಂಡಿಸಿ, ಈಚೆಗೆ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರು ಎಸ್‌ಎಫ್‌ಐ ನೇತೃತ್ವದಲ್ಲಿ ಶಾಲಾ ಕಾಲೇಜು ತ್ಯಜಿಸಿ ಪ್ರತಿಭಟನೆ ನಡೆಸಿದರು.

ಎಸ್‌ಎಫ್‌ಐ ಸಂಘಟನೆ ರಾಜ್ಯಾಧ್ಯಕ್ಷ ಅಮರೇಶ ಕಡಗದ ಮಾತನಾಡಿ, ‘ವಸತಿ ನಿಲಯದ ಗುಣಮಟ್ಟದ ಆಹಾರ ನೀಡಬೇಕಾದ ವಾರ್ಡನ್ ಮತ್ತು ಅಡುಗೆ ತಯಾರಕರು ಕೊಳೆತ ತರಕಾರಿಯಲ್ಲಿ ಕಳಪೆ ಗುಣಮಟ್ಟದಲ್ಲಿ ಆಹಾರ ನೀಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಸರ್ಕಾರ ಭರಿಸುವಾಗ, ವಿದ್ಯಾರ್ಥಿಗಳ ವೇತನ ವಸತಿ ನಿಲಯಕ್ಕೆ ಕಡಿತ ಮಾಡಿಕೊಳ್ಳುವಾಗ ಗುಣಮಟ್ಟದ ಆಹಾರ ನೀಡಲು ಏನೂ ಕಷ್ಟ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಹಾಗೆಯೇ ವಸತಿ ನಿಲಯದಲ್ಲಿ ಕರೆಂಟ್ ಸ್ವಿಚ್ ಬೋರ್ಡ್ ಸೇರಿ ಹಲವು ಮೂಲಸೌಲಭ್ಯಗಳಿಗಾಗಿ ವಿದ್ಯಾರ್ಥಿಗಳು ನಿತ್ಯ ಪರದಾಡಬೇಕಾದ ಸ್ಥಿತಿಯಿದೆ. ಕೂಡಲೇ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಬಿಸಿಎಂ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಅಧಿಕಾರಿ, 2-3 ದಿನಗಳಲ್ಲಿ ವಸತಿನಿಲಯದಲ್ಲಿನ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.

ಎಸ್‌ಎಫ್‌ಐ ಸಂಘಟನೆ ತಾಲ್ಲೂಕು ಜ್ಞಾನೇಶ ಕಡಗದ, ಶಿವು ಕುಮಾರ,ಮುತ್ತಣ್ಣ, ಬಾಳಪ್ಪ, ರವಿ, ಅಮರೇಶ, ದಾನಪ್ಪ, ದೇವರಾಜ ಸೇರಿ ವಸತಿ ನಿಲಯದ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT