ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಶಿಕ್ಷಣ, ದುಡಿಮೆಯಿಂದ ಸಮಾಜ ಅಭಿವೃದ್ಧಿ ಸಾಧ್ಯ’

Published : 26 ಸೆಪ್ಟೆಂಬರ್ 2024, 15:01 IST
Last Updated : 26 ಸೆಪ್ಟೆಂಬರ್ 2024, 15:01 IST
ಫಾಲೋ ಮಾಡಿ
Comments

ಯಲಬುರ್ಗಾ: ‘ಸಮುದಾಯದ ಅಭಿವೃದ್ಧಿಯು ಶಿಕ್ಷಣ ಮತ್ತು ದುಡಿಮೆಯಿಂದ ಸಾಧ್ಯ. ಜತೆಗೆ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ಬಹುಮುಖ್ಯ ಪಾತ್ರವಾಗುತ್ತದೆ’ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದಲ್ಲಿ ಜಿಲ್ಲಾ ಗಾಣಿಗ ಸಮಾಜದ ವತಿಯಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಗಾಣಿಗ ಸಮುದಾಯ ಭವನ ನಿರ್ಮಾಣಕ್ಕೆ ಸೂಕ್ತ ಪ್ರದೇಶದಲ್ಲಿ ನಿವೇಶನ ಒದಗಿಸಿದರೆ ₹8 ಕೋಟಿ ಅನುದಾನ ನೀಡಲಾಗುವುದು. ಈ ಬಗ್ಗೆ ಸಮುದಾಯದ ಮುಖಂಡರು ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಹೇಳಿದರು.

ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ‘ದೊಡ್ಡ ಸಮಾಜದವರು ಎಂದುಕೊಂಡು ಕುಳಿತರೆ ಪ್ರಯೋಜನವಿಲ್ಲ. ಎಲ್ಲ ಸಮಾಜದವರೊಂದಿಗೆ ಉತ್ತಮ ಸ್ನೇಹ–ಸಂಬಂಧ ಹೊಂದಿರಬೇಕು. ಹೊಂದಾಣಕೆಯಿದ್ದರೆ ಮಾತ್ರ ರಾಜಕೀಯದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಹೇಳಿದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಸಮಾಜದ ವತಿಯಿಂದ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ವಿದ್ಯಾರ್ಥಿ ನಿಲಯ ಅಥವಾ ಇನ್ನಿತರ ಯಾವುದೇ ಬಹು ಉಪಯೋಗಿ ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಸಂಸದ ನಿಧಿಯಿಂದ ಆರ್ಥಿಕ ನೆರವು ನೀಡುವುದಾಗಿ ಹೇಳಿದರು.

ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ ಸಮುದಾಯ ಭವನ ನಿರ್ಮಾಣಕ್ಕೆ ಎರಡು ಎಕರೆ ಜಮೀನು ನೀಡುವುದಾಗಿ ಘೋಷಿಸಿದರು.

ಸಮಾಜದ ಜಿಲ್ಲಾ ಅಧ್ಯಕ್ಷ ತೋಟಪ್ಪ ಕಾಮನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಬಸವಕುಮಾರ ಸ್ವಾಮೀಜಿ, ಯಡ್ಡೋಣಿಯ ಕೇಶವಾನಂದ ಸ್ವಾಮೀಜಿ, ಮಾಜಿ ಸಚಿವ ಎಸ್.ಕೆ. ಬೆಳ್ಳೂಬ್ಬಿ ಮಾತನಾಡಿದರು.

ಜಿಲ್ಲೆಯಲ್ಲಿ ವಿವಿಧ ತಾಲ್ಲೂಕಿನ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಬೆಳಿಗ್ಗೆ ಮೊಗ್ಗಿಬಸವೇಶ್ವರ ದೇವಸ್ಥಾನದಿಂದ ವೇದಿಕೆಯ ವರೆಗೂ ಮಹಿಳೆಯರ ಅದ್ದೂರಿ ಕುಂಭೋತ್ಸವ ಜರುಗಿತು.

ಮುಖ್ಯ ಸಂಚೇತಕ ದೊಡ್ಡನಗೌಡ ಪಾಟೀಲ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಗಂಗಾವತಿ ಶಾಸಕ ಜನಾರ್ಧನರೆಡ್ಡಿ, ಮಾಜಿ ಎಂಎಲ್‍ಸಿ ಶಿವರಾಜ ಸಜ್ಜನ, ಎಂಎಲ್‍ಸಿ ಹೇಮಲತಾ ನಾಯಕ, ಮಾಜಿ ಸಂಸದ ಸಂಗಣ್ಣ ಕರಡಿ, ಆನಂದ ನ್ಯಾಮಗೌಡ, ಅಮರೇಗೌಡ ಬಯ್ಯಾಪೂರ, ಹಸನಸಾಬ ದೋಟಿಹಾಳ, ಅಮರಗುಂಡಪ್ಪ ಮೇಟಿ, ನವೀನ ಗುಳಗಣ್ಣವರ, ಬಸವಲಿಂಗಪ್ಪ ಭೂತೆ, ರುದ್ರಮುನಿ ಗಾಳಿ, ಸುಧಾಕರ ದೇಸಾಯಿ, ಶಶಿಧರ ಕೊಳಜಿ, ಬಿ. ಕಲ್ಲೇಶ, ಹನಮಂತಗೌಡ ಪಾಟೀಲ, ಶಿವಪುತ್ರಪ್ಪ ತಿಪ್ಪನಾಳ ಸೇರಿ ಅನೇಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT