ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯದ ಹೋರಾಟ ಹತ್ತಿಕ್ಕುವ ಯತ್ನ; ಬೇಡಜಂಗಮ ಸಮಾಜದ ಪ್ರತಿಭಟನೆ

ಬೇಡಜಂಗಮ ಸಮಾಜದ ವತಿಯಿಂದ ಪ್ರತಿಭಟನೆ
Last Updated 6 ಜುಲೈ 2022, 16:04 IST
ಅಕ್ಷರ ಗಾತ್ರ

ಯಲಬುರ್ಗಾ: ನ್ಯಾಯಸಮ್ಮತ ಹಾಗೂ ಸಂವಿಧಾನ ಬದ್ಧವಾಗಿ ಲಭ್ಯವಾದ ಹಕ್ಕಿಗಾಗಿ ಸತ್ಯ ಪ್ರತಿಪಾದನಾ ಹೋರಾಟದಲ್ಲಿ ನಿರತರಾಗಿರುವ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಡಿ. ಹಿರೇಮಠ ಸೇರಿದಂತೆ ಸಮಾಜದ ಮುಖಂಡರನ್ನು ಬಂಧಿಸಿದ್ದು ಸಂವಿಧಾನಕ್ಕೆ ಮಾಡಿದ ದ್ರೋಹದ ಕೆಲಸ ಎಂದು ತಾಲ್ಲೂಕು ಬೇಡ ಜಂಗಮ ಸಮಾಜದ ತೀವ್ರವಾಗಿ ಖಂಡಿಸಿದೆ.

ಬುಧವಾರ ಪಟ್ಟಣದ ತಹಶೀಲ್ದಾರ್‌ ಕಚೇರಿ ಎದುರು ಬೇಡ ಜಂಗಮ ಸಮಾಜದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಹಾಗೆಯೇ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ನಡೆದುಕೊಂಡಿದ್ದು ಅಮಾನವೀಯವಾಗಿದೆ ಎಂದು ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕು ಘಟಕ ಅಧ್ಯಕ್ಷ ವೀರಯ್ಯ ಸಂಗನಾಳಮಠ ಮಾತನಾಡಿ, ವಿವಿಧ ಸಮಾಜಗಳಿಗೆ ಪ್ರತಿಭಟನೆ ಅವಕಾಶ ಕೊಡುವ ಸರ್ಕಾರ ಬೇಡ ಜಂಗಮರಿಗೆ ಅವಕಾಶ ಕೊಡದಿರುವುದು ಮಲತಾಯಿ ಧೋರಣೆಯಾಗಿದೆ. ಲಭ್ಯವಿರುವ ಸರ್ಕಾರಿ ಆದೇಶಗಳು, ನ್ಯಾಯಾಲಯದ ತೀರ್ಪುಗಳು ಹಾಗೂ ಇನ್ನಿತ ಅಧಿಕೃತ ದಾಖಲಾತಿಗಳು ಬೇಡಜಂಗಮರು ಪರಿಶಿಷ್ಟಜಾತಿಗೆ ಸೇರಿದವರು ಎಂದು ಸಾಬೀತು ಪಡಿಸುತ್ತಿದ್ದರೂ ಸರ್ಕಾರ ಅಧಿಕೃತವಾಗಿ ಆದೇಶ ನೀಡದೇ ಕೆಲ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕುತಂತ್ರದಿಂದ ಅನಗತ್ಯವಾಗಿ ಹಿಂದೇಟು ಹಾಕಿ ಬೇಡಜಂಗಮ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಮುಖಂಡ ಬಸವರಾಜ ಮಠದ ಮಾತನಾಡಿ, ಹಕ್ಕಿಗಾಗಿ ಹೋರಾಡುವವರನ್ನು ಬಂಧಿಸುವ ಸರ್ಕಾರದ ನಡೆ ಬೇಡಜಂಗಮ ಹಾಗೂ ಪ್ರಜಾಪ್ರಭುತ್ವ ವಿರೋಧಿನೀತಿಯಾಗಿದೆ. ಇಂತಹ ದಬ್ಬಾಳಿಕೆಯ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ ಎಂದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಸಂಸ್ಥಾನ ಹಿರೇಮಠದ ಪೀಠಾಧಿಕಾರಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ ಬೇಡ ಜಂಗಮರ ನ್ಯಾಯಯುತ ಬೇಡಿಕೆಯನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಉಪ ತಹಶೀಲ್ದಾರ ನಾಗಪ್ಪ ಸಜ್ಜನ್ ಮನವಿ ಸ್ವೀಕರಿಸಿದರು. ವಿರೂಪಾಕ್ಷಯ್ಯ ಗಂಧದ, ವಿರೂಪಾಕ್ಷಯ್ಯ ಪರಯ್ಯನಮಠ, ಪ್ರಭಯ್ಯಸ್ವಾಮಿ ಸೊಪ್ಪಿಮಠ, ರುದ್ರಯ್ಯ, ವಿಶ್ವನಾಥ ಮಲ್ಕಸಮುದ್ರ, ಶ್ರೀಶೈಲ ಹಿರೇಮಠ, ಕಳಕಯ್ಯ ಹಿರೇಮಠ, ಬಸಲಿಂಗಯ್ಯ, ಬಸಯ್ಯ, ಮಾಗುಂಡಯ್ಯ, ಕಲ್ಯಾಣಯ್ಯ, ಅಮೃತಪ್ಪ, ವಿಶ್ವನಾಥ, ನಿಂಗಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT