ಗಂಗಾವತಿ: ತಾಲ್ಲೂಕಿನ ಹಣವಾಳ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ನರೇಗಾ ಕೂಲಿಕಾರರಿಗೆ ಕಾಯಕ ಮಿ ತ್ರರು, ಬಿಎಫ್ಟಿಗಳು ಹಾಜರಾತಿಯಲ್ಲಿ ಅನ್ಯಾಯ ಎಸಗುತ್ತಿದ್ದು, ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ, ಭಾರತೀಯ ಪ್ರಜಾ ಸಂಘದ ಕಾರ್ಯಕರ್ತರು ನಗರದ ತಾಲ್ಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾಧ್ಯಕ್ಷ ನೀಲಪ್ಪ ಕುಕನೂರ ಮಾತನಾಡಿ, ‘ಹಣವಾಳ ಪಂಚಾಯಿತಿ ವ್ಯಾಪ್ತಿಯ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾಯಕ ಮಿತ್ರರು, ಬಿಎಫ್ಟಿಗಳು ನಿಜವಾದ ಕೂಲಿಕಾರರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೂಲಿ ಕೆಲಸಕ್ಕೆ ಬಾರದೆ ಇರುವ ಕೂಲಿಕಾರರಿಗೆ ಎನ್ಎಂಎಂಎಸ್ ಆ್ಯಪ್ ಮೂಲಕ ಹಾಜರಾತಿ ಹಾಕುತ್ತಿದ್ದಾರೆ. ಸಾಕಷ್ಟು ಜನರು ಕೂಲಿ ಕೆಲಸಕ್ಕೆ ಬಾರದೆ ಮನೆಯಲ್ಲಿಯೇ ಕುಳಿತುಕೊಂಡು ಕೂಲಿ ಹಣ ಪಡೆದುಕೊಳ್ಳುತ್ತಿದ್ದಾರೆ. ಬಾರದೆ ಇದ್ದರೂ ಹಾಜರಾತಿ ಹಾಕುವ ಅಧಿಕಾರಿಗಳು ಕಮಿಷನ್ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ನಿಜವಾದ ಕೂಲಿಕಾರರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಅನ್ಯಾಯವೆಸಗಿದ ಕಾಯಕ ಮಿತ್ರ, ಬಿಎಫ್ಟಿಗಳನ್ನ ತೆಗೆದು ಹಾಕಬೇಕು’ ಎಂದರು.

‘ನರೇಗಾ ಯೋಜನೆಯಡಿ ಕಡ್ಡಾಯವಾಗಿ 100 ಮಾನವ ದಿನಗಳ ಕೂಲಿ ಕೆಲಸ ನೀಡಬೇಕು. ಕೂಲಿ ಕೆಲಸ ಮಾಡುವ ಸಮಯದಲ್ಲಿ ಪೆಂಡಾಲ್, ಕುಡಿಯುವ ನೀರು ಹಾಗೂ ಪ್ರಥಮ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಬೇಕು. ಕಾಯಕ ಬಂಧು ಒಬ್ಬರಿಗೆ 50ಜನ ಕೂಲಿಕಾರರು ಇರಬೇಕು. 20-30 ಕೂಲಿಕಾರರು ಕಾಯಕ ಬಂಧುಗಳನ್ನ ತೆಗೆದು ಹಾಕಬೇಕು. ಕೂಲಿಕಾರರಿಗೆ ಕೂಲಿ ಹಣ ಪಾವತಿಸಬೇಕು’ ಎಂದರು.

ಸಂಘದ ಮುಖಂಡ ಲೋಕೇಶ, ಶರಣಪ್ಪ, ನಾಗರಾಜ, ದು ರುಗಪ್ಪ, ಮಲ್ಲಪ್ಪ ಚಲವಾದಿ, ಸೂರಪ್ಪ, ಅಯ್ಯಪ್ಪ, ಹನುಮಂತಪ್ಪ, ರಾಜಪ್ಪ, ಚನ್ನಪ್ಪ, ಹುಸೇನಮ್ಮ, ಗಣೇಶ, ಶಿವಾನಂದ, ವೆಂಕಟೇಶ, ಹನುಮಂತಪ್ಪ, ದುರುಗಪ್ಪ, ಲಕ್ಷ್ಮಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.