ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಬಿಡುವಿನ ಬಳಿಕ ಸುರಿಯಿತು ಉತ್ತಮ ಮಳೆ

Published 8 ಜುಲೈ 2024, 8:18 IST
Last Updated 8 ಜುಲೈ 2024, 8:18 IST
ಅಕ್ಷರ ಗಾತ್ರ

ಕೊಪ್ಪಳ: ಹಲವು ದಿನಗಳ ಬಿಡುವಿನ ಬಳಿಕ ನಗರದಲ್ಲಿ ಸೋಮವಾರ ಉತ್ತಮ ಮಳೆ ಸುರಿದಿದೆ.

ಕಳೆದ ತಿಂಗಳು ಅಬ್ಬರದಲ್ಲಿ ಮಳೆಯಾಗಿದ್ದರಿಂದ ರೈತರು ಬಿತ್ತನೆ ಮಾಡಿಕೊಂಡಿದ್ದರು. ಬಳಿಕ ಜೋರಾಗಿ ಮಳೆ ಬಂದಿರಲಿಲ್ಲ. ಕೆಲ ದಿನ ಮೋಡಕವಿದ ವಾತಾವರಣ ಮತ್ತು ತುಂತುರು ಮಳೆಯಷ್ಟೇ ಸುರಿದಿತ್ತು. ಇದರಿಂದಾಗಿ ತಿಂಗಳ ಹಿಂದೆ ನಾಟಿ‌ ಮಾಡಿದ್ದ ಬೆಳೆ ಹಾಳಾಗುವ ಆತಂಕ ಉಂಟಾಗಿತ್ತು. ಆದ್ದರಿಂದ ರೈತರು ಮಳೆ ಎದುರು ನೋಡುತ್ತಿದ್ದರು.

ಸೋಮವಾರ ‌ಬೆಳಿಗ್ಗೆಯಿಂದಲೇ ನಗರದಲ್ಲಿ ಮೋಡಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಆರಂಭವಾಗಿ ಜೋರು ಮಳೆ ಸರಿಯಿತು. ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ಅನುಕೂಲವಾದರೆ ನಗರದಲ್ಲಿ ವಾಹನಗಳ ಸವಾರರು, ವಿದ್ಯಾರ್ಥಿಗಳು ಮಳೆಯಲ್ಲಿ‌ ನೆನೆದು ಮನೆಗೆ ವಾಪಸ್ ಹೋಗಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT