ಶುಕ್ರವಾರ, ಜೂನ್ 18, 2021
28 °C

ಬಿರುಗಾಳಿಗೆ ನೆಲಕ್ಕುರುಳಿದ ಪಪ್ಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಸೋಮವಾರ ರಾತ್ರಿ ಸುರಿದ ಭಾರಿ ಗಾಳಿ ಸಹಿತ ಮಳೆಗೆ ತೋಟಗಾರಿಕೆ ಬೆಳೆಗೆ ಹಾನಿಯಾಗಿದ್ದು, ಮನೆ ಮೇಲಿನ ಹೆಂಚುಗಳು ಹಾರಿ ಹೋಗಿವೆ.

ಸಮೀಪದ ಹಾಬಲಕಟ್ಟಿ ಗ್ರಾಮದ ರೈತ ಶಿವಶರಣಪ್ಪ ಹೆಬ್ಲಿ ಅವರ ಜಮೀನಿನಲ್ಲಿದ್ದ ಪಪ್ಪಾಯ ಗಿಡಗಳು ಕಾಯಿ ಸಮೇತ ನೆಲಕ್ಕುರುಳಿವೆ.

ಈಗಾಗಲೇ ರೈತರು ಲಾಕ್‌ಡೌನ್‌ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಬಿರುಗಾಳಿ ಮತ್ತೊಂದು ಹೊಡೆತ ನೀಡಿದೆ. ಇದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ‘ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಪಪ್ಪಾಯ ಬೆಳೆ ಹಾಳಾಗಿದ್ದು ನೋಡಿ ಕಣ್ಣಾಗ ನೀರು ಬರುತ್ತಿದೆ. ಉತ್ತಮ ಇಳುವರಿ ಬಂತು ಎನ್ನುವಷ್ಟರಲ್ಲಿಯೇ ಗಾಳಿ ನನ್ನ ಬೆಳೆಯನ್ನು ಆಹುತಿ ಪಡೆದುಕೊಂಡಿತು. ಸರ್ಕಾರ ಪರಿಹಾರ ನೀಡಿದರೆ ಮಾತ್ರ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಶಿವಶರಣಪ್ಪ ಹೆಬ್ಲಿ ನೋವು ತೋಡಿಕೊಂಡರು. ಹನುಮನಾಳ, ಹೂಲಗೇರಿ, ಗೊಣ್ಣಾಗರ, ಗಡಚಿಂತಿ ಹಾಗೂ ಅಡವಿಭಾವಿ ಗ್ರಾಮಗಳಲ್ಲಿ ಕೆಲ ಮನೆಗಳ ಹೆಂಚುಗಳು ಹಾರಿ ಹೋಗಿವೆ. ಕೊಯ್ಲಿಗೆ ಬಂದಿದ್ದ ಮಾವಿನ ಫಸಲು ನೆಲಕ್ಕೆ ಹಾಸಿದ್ದು ಸಾಕಷ್ಟು ನಷ್ಟವಾಗಿರುವುದು ಕಂಡುಬಂತು. ವಿದ್ಯುತ್ ತಂತಿ ಕತ್ತರಿಸಿ ಬಿದ್ದ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.