ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಚಿಂತನೆ, ಅಭಿವೃದ್ಧಿ ಮರೆತ ಸರ್ಕಾರ

ರೈತ ವಿರೋಧಿ ಕಾಯ್ದೆ ಖಂಡಿಸಿ ವಿಚಾರ ಸಂಕಿರಣದಲ್ಲಿ ಕೋಡಿಹಳ್ಳಿ ಆಕ್ರೋಶ
Last Updated 10 ಸೆಪ್ಟೆಂಬರ್ 2020, 17:03 IST
ಅಕ್ಷರ ಗಾತ್ರ

ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಹೊರಟಿರುವ ವಿವಿಧ ಕಾಯ್ದೆಗಳು ರೈತರಿಗೆ ಗಂಡಾಂತರಕಾರಿಯಾಗಿವೆಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ನಗರದ ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ರೈತ ಸಂಘ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಮಿಕ ಕಾಯ್ದೆ, ಭೂಸ್ವಾಧೀನ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತಿದ್ದೀರಿ. ದೇಶದ ಆರ್ಥಿಕತೆ ಹಾಳಾಗಿದೆ‌. ಆದರೆ ಅಭಿವೃದ್ಧಿ ಚಿಂತನೆ ಮಾಡವುದನ್ನು ಬಿಟ್ಟು ಕಾಯ್ದೆ ಜಾರಿ ಮಾಡಲು ಹೊರಟಿರುವುದು ಖಂಡನೀಯ ಎಂದರು.

1926ರಲ್ಲಿ ಬ್ರಿಟಿಷ್ ಸರ್ಕಾರ ರಾಯಲ್ ಕಮಿಷನ್ ರಚಿಸಿ, ರೈತರು ಮಾರುಕಟ್ಟೆಗೆ ಬರಬೇಕು, ರೈತರೇ ಪ್ರತಿನಿಧಿಯಾಗಿ ಆಯ್ಕೆ ಆಗಬೇಕು ಎಂಬ ಉದ್ದೇಶದಿಂದ ಎಪಿಎಂಸಿ ಪರಿಕಲ್ಪನೆ ಬಂದಿತು. ಎಪಿಎಂಸಿ ರೈತರದ್ದು, ಯಾವ ರಾಜಕಾರಣಿಯದ್ದು ಅಲ್ಲ. ರೈತರ ಕೈಯಲ್ಲಿ ಇರಬಾರದು ಎಂಬ ಉದ್ದೇಶದಿಂದ ಈಗ ಸುಗ್ರೀವಾಜ್ಞೆಹೊರಡಿಸಿದ್ದಾರೆಎಂದು ಆಕ್ರೋಶ ವ್ಯಕ್ತಪಡಿಸಿದರು.

2013ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ಸಾರ್ವಜನಿಕ ಹಾಗೂ ಕೈಗಾರಿಕಾ ಉದ್ದೇಶಗಳಿಗೆ ಭೂಮಿಯನ್ನು ಸರ್ಕಾರ ಪಡೆಯುವುದಕ್ಕೆ ಮಾಡಿದ ಕಾನೂನು ವಿರೋಧಿಸಿ ನಡೆದ ಸಂಘರ್ಷದಲ್ಲಿ 9 ಜನ ರೈತರು ಸತ್ತರು. ಇದರ ತಪ್ಪಿನಿಂದಾಗಿ ಭೂ ಸ್ವಾಧೀನ ಕಾಯ್ದೆ ಜಾರಿ ಮಾಡಲಾಯಿತು. ಇದರ ಪ್ರಕಾರ ಶೇ 80ರಷ್ಟು ರೈತರ ಒಪ್ಪಿಗೆಮೇರೆಗೆ ಭೂಸ್ವಾಧೀನ ಮಾಡಿಕೊಳ್ಳಬೇಕು ಎಂಬ ಕಾನೂನು ಜಾರಿಯಾಯಿತುಎಂದರು‌.‌

ರಸ್ತೆ, ಹಾಗೂ ಇತರೆ ಕಾರ್ಖಾನೆಗೆ ರೈತರ ಭೂಮಿ ಪಡೆಯಲುರೈತರಿಗೆ ಮಾರುಕಟ್ಟೆ ಬೆಲೆಯ 4ರಷ್ಟು ಹೆಚ್ಚು ಬೆಲೆಪರಿಹಾರ ನೀಡಬೇಕಾಗುತ್ತದೆ. ನಗರ ವ್ಯಾಪ್ತಿಯಲ್ಲಿ 2 ರಷ್ಟು ನೀಡಲಾಗುತ್ತದೆ. ಕೈಗಾರಿಕೆಯವರು ಉದ್ದೇಶಿತ ಯೋಜನೆಗೆ ಬಳಕೆ ಮಾಡಬೇಕು. ಪ್ರಸ್ತುತ ತಿದ್ದುಪಡಿ ಕಾಯ್ದೆಯಲ್ಲಿ ಇದಾವುದೂ ಇಲ್ಲ ಎಂದು ಹೇಳಿದರು.

ಕೃಷಿ ಭೂಮಿಯನ್ನು ಜೋಪಾನ ಮಾಡಿಕೊಳ್ಳಲು1961ರಲ್ಲಿ ಸರ್ಕಾರ ತೀರ್ಮಾನಿಸಿತು. ಕೃಷಿ ಭೂಮಿ ನಮ್ಮೆಲ್ಲರ ಜೀವಧಾತೆ. ಇದನ್ನು ಊಟದ ಬಟ್ಟಲು, ಕಾಮಧೇನು ಎಂದು ಕರೆದರು. ಆಗ ಭೂ ಸುಧಾರಣೆ ಕಾಯ್ದೆ ಜಾರಿ ಮಾಡಲಾಯಿತು. ಇದರ ಉಸ್ತುವಾರಿಯನ್ನು ಸರ್ಕಾರ ರೈತರಿಗೆ ವಹಿಸಿತು. ಇದರ ಪ್ರಕಾರ ರೈತರಲ್ಲದವರು ಕೃಷಿ ಭೂಮಿ ಪಡೆಯುವಂತಿಲ್ಲ ಎಂದು ಹೇಳಲಾಯಿತು. ಪ್ರಸ್ತುತ ತಿದ್ದುಪಡಿಯಲ್ಲಿ ಇದಾವುದು ಇಲ್ಲ ಎಂದು ವಿಷಾದಿಸಿದರು.

ಈಗ ದುಡ್ಡು ಇರೋರೆಲ್ಲ ಭೂಮಿ ಖರೀದಿಸಬಹುದಾಗಿದೆ.‌‌ ಭೂಮಿ ದರ ಹೆಚ್ಚಾಗುತ್ತದೆ. ಇದು ರೈತರಿಗೆ ಲಾಭ ಆಗುತ್ತದೆ ಎಂದು ಕಾಯ್ದೆ ಪರ ಮಾತನಾಡುವ ರಾಜಕಾರಣಿಗಳಿಗೆ ನಾಚಿಗೆ ಆಗಬೇಕು ಎಂದು ಕಿಡಿಕಾರಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಬೈರೇಗೌಡ ಬತ್ತನಹಳ್ಳಿ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಹನುಮಂತಪ್ಪ ಹೊಳೆಯಾಚೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ನಜೀರ್ ಅಹ್ಮದ್ ಮೂಲಿಮನಿ, ಮೈಬೂಬಸಾಬ್ ನಾಲಬಂದ್, ಇಸ್ಮಾಯಿಲ್ ಲಾಲ್ ಬಂದ್, ಫಕೀರಪ್ಪ ಗೊಂದಿಹೊಸಳ್ಳಿ, ಎಪಿಎಂಸಿ ಅಧ್ಯಕ್ಷ ನಾಗರಾಜ ಚಳ್ಳೊಳ್ಳಿ, ವೀರೇಶ ಹಳ್ಳಳ್ಳಿ, ಮಹಾಂತಮ್ಮ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT