ತುಗ್ಗಲದೋಣಿ ಬ್ರಿಡ್ಜ್ ಹತ್ತಿರ 2019ರ ಡಿಸೆಂಬರ್‌ನಲ್ಲಿ ಭೀಮಪ್ಪ ಶಾಂತಗೇರಿ ಎಂಬಾತ ಬಾಲಕಿಯನ್ನು ಕರೆಸಿಕೊಂಡು ಟಂಟಂ ವಾಹನದಲ್ಲಿ ಅಪಹರಿಸಿಕೊಂಡು ಬಾದಾಮಿ ರೈಲು ನಿಲ್ದಾಣಕ್ಕೆ ತೆರಳಿದ್ದ. ಬಳಿಕ ಸೊಲ್ಲಾಪುರ, ಸಿಕಂದರಾಬಾದ್‌ಗೆ ಹೋಗಿ ಅಲ್ಲಿ ಅತ್ಯಾಚಾರ ಮಾಡಿದ್ದ. ಇದಷ್ಟೇ ಅಲ್ಲದೆ ಈ ಹಿಂದೆ ಕೂಡ ಸವಡಿ ಗ್ರಾಮದ ಸೀಮಾದ ಜಮೀನಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಹಿನ್ನೆಲೆಯಲ್ಲಿ ಹನುಮಸಾಗರ ಆಗಿನ ಪಿಎಸ್‌ಐ ಅಮರೇಶ ಹುಬ್ಬಳ್ಳಿ ಈ ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.