ಕಾರಟಗಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 98.24 ಅಂಕ ಪಡೆದ ಪಟ್ಟಣದ ಶರಣಬಸವೇಶ್ವರ ಕನ್ನಡ ಮಾಧ್ಯಮ ಅನುದಾನಿತ ಶಾಲೆಯ ವಿದ್ಯಾರ್ಥಿನಿ ಸ್ಪೂರ್ತಿ ಶ್ರೀಕಾಂತ ಅವರನ್ನು ಶನಿವಾರ ಗಂಗಾವತಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ ಎಚ್. ಬಿ.ಸನ್ಮಾನಿಸಿದರು.

ಬಳಿಕ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಅಭ್ಯಾಸದ ಸಮಯದಲ್ಲಿ ಪರಿಶ್ರಮ ವಹಿಸಿ ಉತ್ತಮ ಸಾಧನೆ ಮೆರೆಯಬೇಕು. ಇದರಿಂದ ಶಾಲೆಗೆ, ಪಾಲಕರಿಗೆ ಸಂತೃಪ್ತಿ ದೊರೆಯುವುದಲ್ಲದೇ ಉಜ್ವಲ ಭವಿಷ್ಯಕ್ಕೆ ತುಂಬಾ ಸಹಕಾರಿಯಾಗಲಿದೆ. ಸ್ಪೂರ್ತಿ ಅನುದಾನಿತ ಶಾಲೆಗಳಲ್ಲೇ ಜಿಲ್ಲೆಗೆ ಅಧಿಕ ಅಂಕ ಪಡೆದ ವಿದ್ಯಾರ್ಥಿನಿಯಾಗಿದ್ದು, ವಿದ್ಯಾರ್ಥಿನಿಯ ಉನ್ನತ ವ್ಯಾಸಂಗಕ್ಕೆ ಬೇಕಾದ ಸಹಾಯ ಮಾಡಲು ಸಿದ್ಧ’ ಎಂದು ಹೇಳಿದರು.

ಫಲಿತಾಂಶ ಸುಧಾರಣೆಗೆ ಇಲಾಖೆಯು ಶಿಕ್ಷಕರಿಗೆ ವಿವಿಧ ರೀತಿಯ ತರಬೇತಿ ನೀಡಿದೆ. ಇದರೊಂದಿಗೆ ವಿದ್ಯಾರ್ಥಿಗಳ ಪರಿಶ್ರಮ ಸೇರಿದರೆ ಉತ್ತಮ ಫಲಿತಾಂಶ ಬರಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿತನವನ್ನು ಅರಿತು ಅಭ್ಯಾಸದಲ್ಲಿ ಮಗ್ನರಾಗಬೇಕು ಎಂದು ಹೇಳಿದರು.

ಶಿಕ್ಷಣ ಸಂಯೋಜಕರಾದ ರಾಘವೇಂದ್ರ, ಆನಂದ ನಾಗಮ್ಮನವರ, ನಿರ್ದೇಶಕ ರಾಕೇಶ ಕಂಚಿ, ಮುಖ್ಯಶಿಕ್ಷಕರಾದ ಜಗದೀಶ ಹಳ್ಳೂರ, ಮಹಾಂತೇಶ ಗದ್ದಿ, ಅಮರೇಶ ಪಾಟೀಲ್, ಶಿಕ್ಷಕರಾದ ಜಗದೀಶ್ ಭಜಂತ್ರಿ, ಮಂಜುನಾಥ ಜಾಲಿಹಾಳ, ಎಂ.ಡಿ. ಇಬ್ರಾಹಿಂ, ಕಲ್ಯಾಣಕುಮಾರ ಚಿನಿವಾಲ, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.